ಇಂಡಿ: ತಾಲೂಕಿನ ಇಂಗಳಗಿ ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಅಧ್ಯಕ್ಷರಾಗಿ ಲಕ್ಷ್ಮೀ ದುವಂತ ಮತ್ತು ಉಪಾಧ್ಯಕ್ಷರಾಗಿ ಅಜೀತ ಕದಮ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀಬಾಯಿ ದಶವಂತ ಮತ್ತು ಜಯ ಶ್ರೀ ಹೊನಕೊರೆ ಸ್ಪರ್ಧಿಸಿದ್ದರು. ಲಕ್ಷ್ಮೀಬಾಯಿ ದಶವಂತ ಇವರಿಗೆ ಹತ್ತು ಮತಗಳು ಮತ್ತು ಜಯಶ್ರೀ ಹೊನಕೊರೆಯವರಿಗೆ ಐದು ಮತಗಳು ಬಂದವು. ಉಪಾಧ್ಯಕ್ಷ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದು ಅಜೀತ ಕದಮ ಮತ್ತು ದೊಂಡಿಬಾ ಮಾನೆ ಸ್ಪರ್ಧಿಸಿದ್ದರು. ಅಜೀತ ಮಾನೆಯವರಿಗೆ 8 ಮತಗಳು ಮತ್ತು ದೊಂಡಿಬಾ ಮಾನೆಯವರಿಗೆ 7 ಮತಗಳು ಬಂದವು. ತಾ.ಪಂ ಇಒ ಸುನೀಲ ಮದ್ದೀನ ಚುನಾವಣೆ ಅಧಿಕಾರಿಯಾಗಿದ್ದರು. ಪಿಡಿಒ ಸಂಗೀತಾ ಬಗಲಿ ಮತ್ತಿತರಿದ್ದರು.