ಅದು ಹೊಸ ಗ್ರಾ.ಪಂ ಆಗಿ ವರ್ಷ ಕಳೆದ್ರೂ, ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದಲ್ಲದೇ ಅಭಿವೃದ್ಧಿ ಮಾಡದೆ ಅನುದಾನ ದುರ್ಬಳಕೆ ಮಾಡಿದ್ದಾರೆ ಎಂದು ಗ್ರಾ.ಪಂ.ಗೆ ಬಿಗ ಜಡಿದು ಸ್ಥಳೀಯ ಜನ್ರು ಆಕ್ರೋಶ ಹೊರ ಹಾಕಿದ್ದಾರೆ.
ಇಂಡಿ: ಹೌದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮಕ್ಕೆ ಕಳೆದ ವರ್ಷ ಹೊಸ ಗ್ರಾ.ಪಂ. ಮಂಜೂರಾಗಿತ್ತು. ಇನ್ನೇನು ನಮ್ಮ ಗ್ರಾಮ ಅಭಿವೃಧ್ಧಿ ಆಗುತ್ತದೆ ಅಂತಾ ಕನಸು ಕಂಡಿದ್ದ ಜನರಿಗೆ ಇದೀಗ ನಿರಾಶೆಯಾಗಿದೆ. ಹೊಸ ಗ್ರಾ.ಪಂ ರಚನೆಯಾಗಿ ವರ್ಷ ಕಳೆದ್ರೂ ಸರಿಯಾಗಿ ಮೂಲಭೂತ ಸೌಕರ್ಯಗಳು ಸಿಗದೆ ವಂಚಿತರಾದ ಗ್ರಾಮಸ್ಥರು ಇಂದು ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಇನ್ನು ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆ ಮೂಲಕ ಗ್ರಾ.ಪಂ ಗಳಿಗೆ ಕೋಟ್ಯಾಂತರ ರೂ. ಅನುಧಾನ ನೀಡುತ್ತಿದ್ರೂ, ಅಧಿಕಾರಿಗಳು ಹಾಗೂ ಗ್ರಾ.ಪಂ ಸದಸ್ಯರು ಅದನ್ನು ಬಳಸಿಕೊಂಡು ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಕೈಗೊಳದೆ, ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದರು. ಗ್ರಾಮದಲ್ಲಿ ನೀರು, ವಿದ್ಯುತ್ ಬೆಳಕು, ರಸ್ತೆ, ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಸರಿಯಾಗಿ ಇಲ್ಲದೆ ಸೌಕರ್ಯ ವಂಚಿತರಾಗಿ ಗ್ರಾಮಸ್ಥರು ಬದುಕುತ್ತಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಎಲ್ಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.