ಬೆಂಗಳೂರು: ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ಅರಗ ಜ್ಞಾನೇಂದ್ರ ಅವನು ಅಜ್ಞಾನದ ಜ್ಞಾನೇಂದ್ರ. ಕರ್ಫ್ಯೂ ಜಾರಿ ಮಾಡಿ ಜನರ ಜೀವನದ ಬದುಕಿನ ಜೊತೆ ಆಟ ವಾಡುತ್ತಿದ್ದಾರೆ. ಕರೋನಾ ತಡೆಯಲು ನಿಯಮಗಳನ್ನು ಮಾಡುವುದು ಬಿಟ್ಟು ಏನೇನೋ ಮಾತನಾಡುತ್ತಾರೆ. ಪಾದಯಾತ್ರೆ ವೇಳೆ ಕರೋನಾ ಬ್ರೇಕ್ ಮಾಡಿದ್ದೀವಿ ಅಂತಿರಲ್ಲಾ ನನ್ನ ಮತದಾರರ ವೋಟರ್ ಐಡಿ ಕೋಡುತ್ತೇನೆ ಎಲ್ಲರನ್ನು ಅರೆಸ್ಟ್ ಮಾಡಿ ಎಂದು ಗೃಹ ಸಚಿವರಿಗೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.