VOJ ನ್ಯೂಸ್ ಡೆಸ್ಕ್: ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿ ಕಣ್ಮರೆಯಾಗಿರುವ ನಟ ಪುನೀತ್ ರಾಜ್ ಕುಮಾರ್ ಅವರ ಯಶೋಗಾಥೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸಲು ಸರ್ಕಾರ ಚಿಂತನೆ ಮಾಡಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಮಾಹಿತಿ ನೀಡಿದ್ದಾರೆ.
ಅಪ್ಪು ಅವರ ಸಾಧನೆ, ವ್ಯಕ್ತಿತ್ವ, ಸಮಾಜ ಮುಖಿ ಚಟುವಟಿಕೆಗಳು ಮತ್ತು ಪರಿಸರ ಪ್ರೇಮ ಹೀಗೆ ಹತ್ತು ಹಲವು ವಿಷಯಗಳು ಚಿಕ್ಕ ಮಕ್ಕಳಿಗೆ ತಿಳಿಯಬೇಕು ಎಂದು ಆಗ್ರಹಿಸಿ ಹಲವು ಸಂಘ ಸಂಘಟನೆಗಳು ಮನವಿ ಸಲ್ಲಿಸಿವೆ. ಪಠ್ಯಕ್ರಮದಲ್ಲಿ ಅಪ್ಪು ಕುರಿತ ಮಾಹಿತಿ ಕೋಶ ಸೇರಿಸುವಂತೆ ಮನವಿ ಮಾಡಿವೆ ಎಂದು ನಾಗೇಶ್ ತಿಳಿಸಿದ್ದಾರೆ.
ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ನಾಲ್ಕು ಅಥವಾ ಐದನೇ ತರಗತಿ ಪಠ್ಯಕ್ರಮದಲ್ಲಿ ಇದನ್ನು ಅಳವಡಿಸುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.