ವಿಜಯಪುರ : ಸರ್ಕಾರ ಬಡವರು, ಮಧ್ಯಮವರ್ಗ, ಕೂಲಿ ಕಾರ್ಮಿಕರ ಮಕ್ಕಳಿಗೆ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯನ್ನು ತೆಗೆದು ಉತ್ತಮ ಶಿಕ್ಷಣ ಒದಗಿಸುತ್ತೇವೆ ಎಂದು ಶಿಕ್ಷಣ ಸಚಿವರು ಸಭೆ ಸಮಾರಂಭಗಳಲ್ಲಿ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಮಾಡ ಹೊರಟಿರುವುದು ಏನು ?
ರಾಜ್ಯ ಸರ್ಕಾರ 15000 ಶಿಕ್ಷರ ನೇಮಕಾತಿಗೆ ಅನುಮತಿ ನೀಡಿದ್ದು, ಅದರಲ್ಲಿ ಕೇವಲ 1500 ಆಂಗ್ಲ ಭಾಷಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಖಾಲಿ ಇರುವ ಎಲ್ಲ ಆಂಗ್ಲ ಭಾಷಾ ಶಿಕ್ಷಕ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ನಗರದ ಜೋಡಗುಮ್ಮಟದಿಂದ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ವೃತ್ತ ಮಾರ್ಗದ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಂಘಟನೆಗಳು ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಮಾಡಿ ಅಸಮಾಧಾನ ಹೊರ ಹಾಕಿವೆ.
ಈ ಸಂದರ್ಭದಲ್ಲಿ ಸರ್ಕಲ್ ನೀರುದ್ಯೋಗ ಯುವಜನ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲೀಷ ಶಿಕ್ಷಣದ ಮೌಲ್ಯ ಹಾಗೂ ಅತ್ಯವಶ್ಯಕತೆ ಇದ್ದು, ಇಂಗ್ಲೀಷ ಶಿಕ್ಷಕರ ನೇಮಕಾತಿಗೆ ಆಕಾಂಕ್ಷಿಗಳ ಅಭಾವ ಇದೆ ಎಂದು ಹೇಳುವ ಸರ್ಕಾರ. ಕೆಲವೇ ಹುದ್ದೆಗಳ ಭರ್ತಿಗೆ ಅನುಮತಿ ನೀಡಿರುವುದು ಸರ್ಕಾರದ ದ್ವಂಧ್ವ ನಿಲುವನ್ನು ತೋರಿಸುತ್ತದೆ.
ಇತ್ತೀಚೆಗೆ ಕರ್ನಾಟಕ ಸರಕಾರವು 15000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಈ ಅಧಿಸೂಚನೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಿಗೆ ಕೇವಲ 1500 ಪೋಸ್ಟ್ ಗಳನ್ನು ಒದಗಿಸಿರುವುದು ಅತ್ಯಂತ ಅಮಾನವೀಯ ಹಾಗೂ ಅನ್ಯಾಯ. ಇದನ್ನು ನಿರುದ್ಯೋಗ ಯುವ ಜನ ಹೋರಾಟ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಸರ್ಕಾರದ ಅಂಕಿ ಸಂಖ್ಯೆಗಳ ಪ್ರಕಾರ ರಾಜ್ಯದಲ್ಲಿ 58 ಸಾವಿರ ಖಾಲಿ ಶಿಕ್ಷಕರ ಹುದ್ದೆಗಳಿವೆ. ಆದರೆ ಸರಕಾರ ಕೇವಲ 15000 ಹುದ್ದೆಗಳನ್ನು ಭರ್ತಿ ಮಾಡುವುದು ನಾಚಿಕೆಗೇಡಿನ ಸಂಗತಿ. ಇನ್ನೊಂದೆಡೆ 10,000 ಸಾವಿರಕ್ಕೂ ಹೆಚ್ಚು ಆಂಗ್ಲ ಭಾಷಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸರ್ಕಾರ ಕೇವಲ 1500 ಆಂಗ್ಲ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳುತ್ತಿರುವುದ ಶಿಕ್ಷಣ ಕ್ಷೇತ್ರದ ಕಡೆಗಣನೆಯಾಗುತ್ತಿದೆ. ಸರ್ಕಾರ ಕೂಡಲೇ ಆಂಗ್ಲ ಭಾಷಾ ಶಿಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭರ್ತಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ದೋಷ ಕೂಡಲೇ ಸರಿಪಡಿಸದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನಾ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಕಾವೇರಿ ರಜಪೂತ, ಸುರೇಖಾ ಕಡಪಟ್ಟಿ, ಶ್ರೀಕಾಂತ್, ಸುಹಾಸಿನಿ, ಶಿಲ್ಪಾ, ವಿರಮ್ಮ, ಸಂಗಮ್ಮ, ಹೇಮಾ, ಅನೀತಾ, ಆಶಾ, ಉಮೇಶ್, ರತ್ನಾ ಪವಿತ್ರಾ, ವಿಠ್ಠಲ, ಶಿವರಾಜ್ , ಶೀವು ಅನೇಕರು ಉಪಸ್ಥಿತರು.