ಲಿಂಗಸೂಗೂರು : ಕಳೆದ ಇಪ್ಪತ್ತೊಂದು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರೀಯವಾಗಿರುವ ಮುದಗಲ್ ನ ಹಿರಿಯ ಹಾಗೂ ರಾಷ್ಟ್ರೀಯ ಪತ್ರಕರ್ತ ಶರಣಯ್ಯ ಒಡೆಯರ್ ರವರು ಗೌರವ ಡಾಕ್ಟರೇಟ್ ಗೆ ಭಾಜನರಾಗಿದ್ದಾರೆ.
ಪತ್ರಿಕೆಯ ಲೇಖನಿ ಮೂಲಕ ಸಮಾಜದಲ್ಲಿನ ಅಂಕಡೊಂಕು ತಿದ್ದುವದರೊಂದಿಗೆ ಮಾನವೀಯತೆ ಹಾಗೂ ಸೃಜನಶೀಲ ಬರವಣಿಗೆ ಇಂದಾಗಿ ಸಮಾಜದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.ನೇರ ಮತ್ತು ನಿಷ್ಟುರತೆಯೊಂದಿಗೆ ಸಮಾಜದ ಸಿದ್ದಾಂತವನ್ನು ಪ್ರತಿಪಾದಿಸುವದರ ಜೊತೆಗೆ ಅನೇಕ ಅಶಕ್ತರ ಬದುಕಿಗೆ ಆಸರೆಯಾಗಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಅಲ್ಲದೆ ಮಾಧ್ಯಮದ ಜೊತೆ,ಜೊತೆಯಲ್ಲಿ ಸಹಕಾರ ಸಂಘ,ರೈತ ಉತ್ಪಾದಕರ ಸಂಘ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಮೂಲಕ ಸಾಕಷ್ಟು ಸಮಾಜ ಸೇವೆಯಲ್ಲಿ ತೊಡಗಿರುವದು ವಿಶೇಷವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳನಾಡಿನ ಚೆನೈದಲ್ಲಿ ಏಷಿಯಾ ವೈದಿಕ ಕಲ್ಚರ್ ರಿಸರ್ಚ್ ಇನ್ವರ್ಸಿಟಿಯಿಂದ ಶರಣಯ್ಯ ಬಿ.ಒಡೆಯರ್ ರವರಿಗೆ ಇಂದು ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಮಾಧ್ಯಮ ಕ್ಷೇತ್ರದಲ್ಲಿ “ಅತ್ಯುತ್ತಮ ಪ್ರಶಸ್ತಿಗಳು”, ಕನ್ನಡ ಸಂಘಟನೆಗಳಿಂದ “ಕರುನಾಡ ಪದ್ಮ ಶ್ರೀ” ಹಾಗೂ ಸಾಹಿತ್ಯ ಪರಿಷತ್ತಿನಿಂದ “ಸೇವಾರತ್ನ” ಪ್ರಶಸ್ತಿ ಸೇರಿ ಅನೇಕ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಶರಣಯ್ಯ ಒಡೆಯರ್ ಗೆ ಪಟ್ಟಣದ
ಪತ್ರಕರ್ತರು ಸೇರಿದಂತೆ ಅನೇಕ ಮುಖಂಡರು ಅಭಿನಂದಿಸಿದ್ದಾರೆ.