ಕ್ರೀಡೆಯನ್ನು ಆಯೋಜನೆ ಮಾಡುವುದರಿಂದ ಉತ್ತಮ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ :ಎಂ ಆರ್ ಮಂಜುನಾಥ್
ಹನೂರು: ಶ್ರೀ ಬೆಟ್ಟಳ್ಳಿ ಮಾರಮ್ಮ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ನಡೆದಂತಹ ರಾಜ್ಯಮಟ್ಟದ ಟೂರ್ನಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಣೆ ಮಾಡಿದ ಶಾಸಕ ಎಂ.ಆರ್ ಮಂಜುನಾಥ್.
ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಶಾಸಕ ಎಂ.ಆರ್ ಮಂಜುನಾಥ್ ಕಪ್ ಎಂಬ ಶೀರ್ಷಿಕೆಯಡಿಯಲ್ಲಿ ಹೊನಲು ಬೆಳಕಿನ ಪುರುಷರ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿಯನ್ನು ಆಯೋಜನೆ ಮಾಡಲಾಗಿತ್ತು. ಅಂತಿಮವಾಗಿ ದಾಸಪುರ ತಂಡ ಪ್ರಥಮ ಸ್ಥಾನಗಳಿಸಿದರೆ, ಚನ್ನರಾಯಪಟ್ಟಣ ತಂಡ ದ್ವೀತಿಯ ಸ್ಥಾನ, ತೃತೀಯ ಸ್ಥಾನವನ್ನು ಕಲ್ಕಿ ಬಾಯ್ಸ್ ,ನಾಲ್ಕನೇ ಬಹುಮಾನ ಕಲ್ಕಿ ವಾರಿರ‍್ಸ್ ತಂಡದ ಪಾಲಾಯಿತು.
ಈಟೂರ್ನಿಯಲ್ಲಿ ಮೈಸೂರು, ಮಂಡ್ಯ ಚಾಮರಾಜನಗ, ರಾಮನಗರ, ಹಾಸನ ಜಿಲ್ಲೆಯ ನಾನಾ ಕಡೆಗಳಿಂದ ಹೆಚ್ಚಿನ ತಂಡಗಳು ಪಾಲ್ಗೊಂಡಿದ್ದವು. ಈ ಟೂರ್ನಿಯಲ್ಲಿ ಪ್ರಥಮ ಬಹುಮಾನ ರೂ 25,೦೦೦ (ಆಕರ್ಷಕ ಟ್ರೋಪಿ)ದ್ವಿತೀಯ ಬಹುಮಾನ ರೂ2೦,೦೦೦ (ಆಕರ್ಷಕ ಟ್ರೋಪಿ )ಹಾಗೂ ತೃತೀಯ ಬಹುಮಾನ ರೂ15,೦೦೦ (ಆಕರ್ಷಕ ಟ್ರೋಫಿ) ನಾಲ್ಕನೇ ಬಹುಮಾನ ರೂ1೦,೦೦೦ (ಆಕರ್ಷಕ ಟ್ರೋಫಿ) ಎನ್ನು ವಿತರಿಸಲಾಯಿತು. ಈ ಟೂರ್ನಿಯ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿ ಶಾಸಕ ಎಮ್ ಆರ್ ಮಂಜುನಾಥ್ ಮಾತನಾಡಿ ತಾಲೂಕಿನಲ್ಲಿ ಕ್ರೀಡೆ ನಡೆಯುವುದರಿಂದ ಉತ್ತಮ ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತದೆ.ಸೋಲು ಗೆಲುವು ಯಾವುದೇ ಇರಲಿ ಸ್ನೇಹಮಯದಿಂದ ಆಡಬೇಕು ಕ್ಷೇತ್ರದಲ್ಲಿನ ಉತ್ತಮ ಆಟಗಾರರ ಪ್ರತಿಭೆಗಳಿಗೆ ಶಕ್ತಿ ತುಂಬಲು ಸದಾ ಸಿದ್ದಾ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಆನಂದ್, ಸಬ್ ಇನ್ಸಪೆಕ್ಟರ್ ಮಂಜುನಾಥ್ ಪ್ರಸಾದ್, ಮಡಿವಾಳ ಸಮುದಾಯ ಸಂಘದ ಅದ್ಯಕ್ಷ ವಿಜಯ್ ಸ್ಥಳೀಯ ಮುಖಂಡರಾದ ರಾಜುಗೌಡ,ವೆಂಕಟೇಶ್, ಸತೀಶ್,ರಾಜಣ್ಣ, ಜಸ್ಸಿಮ್,ಕೃಷ್ಣಣ್ಣ, ನಾಗೇಶ್, ವೆಂಕಟೇಶ್, ಹಾಗೂ ಆಯೋಜಕರಾದ ವಿಶ್ವಾಸ್, ಶ್ರೀನಿವಾಸ್ ಕಲ್ಕಿ ಬಾಯ್ಸ್ ತಂಡದ ಆಟಗಾರರು ಹಾಜರಿದ್ದರು.