ಸಮಾಜಮುಖಿ ಕಾರ್ಯದಲ್ಲಿ ಗೊಳಸಾರ ಮಠದ ಕಾರ್ಯ ಶ್ಲಾಘನೀಯ
ಇಂಡಿ : ಮಠದಲ್ಲಿ ನಿತ್ಯ ದಾಸೋಹ, ಭಕ್ತವರ್ಗಕ್ಕೆ ಪ್ರಸಾದದ ಮೂಲಕ ಕಷ್ಟ ದೂರು ಮಾಡುವ ದೈವಿಸ್ವರೂಪಿ ಪುಂಡಲಿಂಗ ಹಾಗೂ ತ್ರೀಧರೇಶ್ವರ ಶ್ರೀಗಳು ಎಂದು ಸಂಗಮೇಶ ಶಾಸ್ತ್ರೀ ಹೇಳಿದರು.
ಅವರು ತಾಲೂಕಿನ ಗೋಳಸಾರ ಗ್ರಾಮದ ಶ್ರೀ ಸದ್ಗುರು ಚಿನ್ಮಯಮೂರ್ತಿ ತ್ರೀಧರೇಶ್ವರ ಮಹಾಶಿವಯೋಗಿಗಳ ಪುಣ್ಯಾರಾಧನೆ ಮಹೋತ್ಸವದಲ್ಲಿ ಮಾತನಾಡಿದರು.
ಶಾಂತಿ ಮಂತ್ರದ ಮೂಲಕ ಮೌನಕ್ರಾಂತಿ ಮಾಡುತ್ತಿರುವ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ವಯಸ್ಸಿನಲ್ಲಿ ಚಿಕ್ಕವರಿದ್ದರೂ ಶರಣ ತತ್ವದಲ್ಲಿ ಮುಂದಿದ್ದಾರೆ. ದಾಸೋಹ ಪೀಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಸರ್ವರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಅಪ್ಪಾಜಿಯವರಾದ ಮಹಾದಾಸೋಹಮಯಿ, ಪವಾಡಪುರುಷ ಪೂಜ್ಯ ಶ್ರೀಧರೇಶ್ವರ ಮಹಾಶಿವಯೋಗಿಗಳು ಹಾಕಿದ ಮಾರ್ಗದಲ್ಲಿ ಶ್ರೀಮಠದ ಸರ್ವ ಕಾರ್ಯಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಮಾತು ಬೆಳ್ಳಿ, ಮೌನ ಬಂಗಾರ ಎನ್ನುವಂತೆ ಚಿನ್ನದಂತೆ ಶೋಭಿಸುವ ಅವರ ಮೌನಕ್ರಾಂತಿ ಸಕಲರಿಗೂ ಮಹಾಪ್ರಸಾದವೇ ಆಗಿದೆ ಎಂದು ಹೇಳಿದರು.
ಚಿಕ್ಕವಯಸ್ಸಿನಲ್ಲಿಯೇ ಮಠದ ಜವಾಬ್ದಾರಿ ಹೊತ್ತುಕೊಂಡು ಮಠದ ವತಿಯಿಂದ ಪ್ರತಿವರ್ಷ ಜಾತ್ರಾ ಮಹೋತ್ಸವಗಳನ್ನು ಅದ್ದೂರಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ ಅಲ್ಲದೆ ಸಾಮೂಹಿಕ ವಿವಾಹ, ಆರೋಗ್ಯ ತಪಾಸಣೆ, ಧಾರ್ಮಿಕ ಕಾರ್ಯಕ್ರಮಗಳು ಸಮಾಜಮುಖಿಯಾಗಿವೆ. ಅಜ್ಜ ಪೂಜ್ಯ ಪುಂಡಲಿಂಗ ಮಹಾಶಿವಯೋಗಿಗಳು ಹಾಗೂ ಅಜ್ಜಿ ಭಾಗಮ್ಮ ಮಾತಾ ಅವರ ಹೆಸರಿನಲ್ಲಿ ರಥೋತ್ಸವ, ಅಪ್ಪಾಜಿ ಶ್ರೀಧರೇಶ್ವರ ಮಹಾಶಿವಯೋಗಿಗಳ ಪುಣ್ಯಾರಾಧನೆ ಮಹೋತ್ಸವ, ಇದೂ ಅಲ್ಲದೆ ಪ್ರತಿ ಅಮವಾಸ್ಯೆಯಂದು ನಾಡಿನ ಪಂಡಿತರು, ಶರಣರನ್ನು ಕರೆಸಿ ಭಕ್ತರಿಗೆ ಶಿವಸ್ಮರಣೆ ಉಣಬಡಿಸುವ ಶಿವಾನುಭವಗೋಷ್ಠಿಯನ್ನು ಹಮ್ಮಿಕೊಳ್ಳುತ್ತಿರುವುದು ಈ ಭಾಗದ ಭಕ್ತರ ಭಾಗ್ಯ ಎಂದು ಹೇಳಿದರು. ಮಠದಲ್ಲಿ ನಿತ್ಯ ದಾಸೋಹ ಸೇವೆ ಹಮ್ಮಿಕೊಂಡು, ಬರುವ ಭಕ್ತವರ್ಗಕ್ಕೆ ಪ್ರಸಾದದ ಮೂಲಕ ಕಷ್ಟಗಳನ್ನು ದೂರು ಮಾಡುವ ದೈವಿಸ್ವರೂಪಿಯಾಗಿ ನಿಂತವರು ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ತ್ಯಾಗಮಯಿ ಬದುಕು ಸಾಗಿಸುತ್ತಿದ್ದಾರೆ. ಸಂಸಾರಿಕ ಜೀವನದಲ್ಲಿ ಇದ್ದುಕೊಂಡು, ಪಾರಮಾರ್ತಗೈದು ನಿತ್ಯ ದಾಸೋಹದಿಂದ ಜ್ಞಾನ ದಾಸೋಹ ನಡೆಸುತ್ತಿದ್ದಾರೆ ಎಂದು ಹೇಳಿದರು.
ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು,
ಅಭಿನವ ಮುರುಘೇಂದ್ರ ಶ್ರೀಗಳು,ಅಭಿನವ ಶಿವಲಿಂಗೇಶ್ವರ ಶ್ರೀಗಳು,ಮಲ್ಲಿಕಾರ್ಜುನ ಮಹಾಸ್ವಾಮಿಜಿ, ಸಂಗಮೇಶ ಶಾಸ್ತ್ರೀ ಸಾನಿಧ್ಯ ವಹಿಸಿದ್ದರು.
ಶಿವಯೋಗೆಪ್ಪ ಚನಗೊಂಡ, ಜಟ್ಟೆಪ್ಪ ರವಳಿ ಕಾರ್ಯಕ್ರಮದಲ್ಲಿ ಇದ್ದರು.ಎಂ.ಆರ್.ಪಾಟೀಲ,ಎಸ್.ಆರ್.ಮೇತ್ರಿ, ಶಿವಲಿಂಗಪ್ಪ ಬಾಗೇವಾಡಿ,ಹಣಮಂತ ಮಾಲಗಾರ, ಜಟ್ಟೆಪ್ಪ ಡೊಂಬಳಿ,ಗುರುಲಿಂಗಪ್ಪ ತೆಗ್ಗೆಳ್ಳಿ, ಶಿವಲಿಂಗಪ್ಪ ನಾಗಠಾ, ರವೀಂದ್ರ ಆಳೂರ, ಸಿದ್ದರಾಮ ತೆಗ್ಗಿಹಳ್ಳಿ,ರವಿ ಕೆರುಟಗಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
















