ಅನ್ಯ ಕೋಮಿನ ಯುವಕನಿಂದ ದೇವಿಮೂರ್ತಿ ನಗ್ನ..! ಹಿಂದು ಸಂಘಟನೆಗಳಿಂದ ಪ್ರತಿಭಟನೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ..!
ಇಂಡಿ: ದೇವಿಮೂರ್ತಿಗೆ ನಗ್ನ ಮಾಡಿ ದೇವಿ ಕೂರಿಸಿದ
ಸ್ಥಳದಲ್ಲೇ ಮಲಮೂತ್ರ ವಿಸರ್ಜನೆ ಮಾಡಿ
ಅವಹೇಳನ ಮಾಡಿದ ಘಟನೆ ಇಂಡಿ ತಾಲ್ಲೂಕಿನ
ಹಿರೇಬೇವನೂರ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ
ನಡೆದಿದೆ. ಗ್ರಾಮದ ಇಸ್ಲಾಂ ಧರ್ಮದ ಶೌಕತಲಿ ನೈನಸಾಬ
ಮಕಾಂದಾರ ಎಂಬ ಯುವಕ ಈ ಘಟನೆ ನಡೆಸಿದ್ದು,
ಯುವಕನನ್ನು ಇಂಡಿ ಗ್ರಾಮಾಂತರ ಠಾಣೆಯ
ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಿಯ ಗ್ರಾಮಸ್ಥರು ಇಂಡಿ ಅಗರಖೇಡ ರಾಷ್ಟ್ರೀಯ ಹೆದ್ದಾರಿ ತಡೆದು ಮೂರು ಘಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಇಂಡಿ ಗ್ರಾಮಾಂತರ ಸಿಪಿಐ ಎಂ.ಎಂ.ಡಪ್ಪಿನ್, ತಹಸೀಲ್ದಾರ ಬಿ.ಎಸ್. ಕಡಕಭಾವಿ, ಗ್ರಾಮೀಣ ಪಿಎಸ್‍ಐ ಸೋಮೇಶ ಗೆಜ್ಜಿ ಭೇಟಿ ನೀಡಿದರು.
ಪ್ರತಿಭಟನಾ ನಿರತರಿಗೆ ತಪ್ಪಿತಸ್ಥರ ಮೇಲೆ ಸೂಕ್ತ
ಕ್ರಮ ಕೈಗೊಳ್ಳುವ ಭರವಸೆ ನೀಡಿ ಪ್ರತಿಭಟನೆ
ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಶ್ರೀಶೈಲಗೌಡ ಬಿರಾದಾರ, ಶಂಕರ ಹಲವಾಯಿ, ಪ್ರವೀಣ ಉಪ್ಪಿನ, ಟೋಪನಗೌಡ ಪಾಟೀಲ, ಅಯ್ಯನಗೌಡ ಬಿರಾದಾರ,
ಮಹೇಶ ಬೊಮ್ಮನಹಳ್ಳಿ, ಶಾಂತಪ್ಪ ಸೋಲಾಪೂರ, ಈರಣ್ಣ ಸಿಂದಗಿ, ಸುಭಾಶ ಪೂಜಾರಿ, ಪ್ರವೀಣ ಮಠ, ಶಶಿಕಾಂತ ಕೋಳೆಕರ, ಮಲ್ಲಿಕಾರ್ಜುನ ಪೂಜಾರಿ,
ಮಳಸಿದ್ದ ಡಂಗಿ, ಬಾಬುಶಾ ಸೋಲಾಪೂರ, ಕಾರ್ತಿಕಗೌಡ ಪೋಲಿಸ ಪಾಟೀಲ, ಶಿವಾಜಿ ಜಾಧವ, ವಿಶ್ವನಾಥ ಪಾತಾಳೆ, ಮಂಜುನಾಥ ಜಮಾದಾರ, ರಮೇಶ ಬೊಮ್ಮನಹಳ್ಳಿ, ಅಕ್ಷಯ ಹಿಬಾರೆ, ಸಂಜೀವ ಜಾಧವ ಸೇರಿದಂತೆ ಅನೇಕರು ಇದ್ದರು.
ಗೂಂಡಾ ಕಾಯ್ದೆ ಅಡಿ ಯುವಕನ ಮೇಲೆ
ಪ್ರಕರಣ ದಾಖಲಿಸಬೇಕು. ಆತ ಇಂತಹ ನೀಚ
ಕೆಲಸ ಮಾಡಲು ಯಾರು ಪ್ರೇರೇಪಿಸಿದ್ದಾರೆ? ಈ
ಕುರಿತು ತನಿಖೆ ನಡೆಸಬೇಕು. ಇಂತಹ ಧರ್ಮ
ವಿರೋಧಿ ಕೆಲಸ ಮಾಡುವವರಿಗೆ ಕಾನೂನು
ಅಡಿಯಲ್ಲಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು.
ಪ್ರಕಾಶ ಬಿರಾದಾರ,
ವಿಶ್ವ ಹಿಂದೂಪರಿಷತ್ ಭಜರಂಗದಳದ ಜಿಲ್ಲಾ
ಪ್ರಮುಖ,
ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ
ದೇವಿಮೂರ್ತಿಗೆ ನಗ್ನ ಮಾಡಿ ಕೂರಿಸಿದ ಸ್ಥಳದಲ್ಲೇ
ಮಲಮೂತ್ರ ವಿಸರ್ಜನೆ ಮಾಡಿದನ್ನು ಖಂಡಿಸಿ
ಗ್ರಾಮಸ್ಥರು ತಹಶೀಲ್ದಾರ, ಸಿಪಿಐ ಅವರಿಗೆ ಮನವಿ
ಸಲ್ಲಿಸಿದರು.