ತಾಂಬಾ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಾಹಾಶಿವರಾತ್ರಿ ಉತ್ಸವ : ಡಾ// ವೃಷಭಲಿಂಗ ಮಾಹಾಸ್ವಾಮಿಗಳಿಂದ ಕ್ಯಾಲೆಂಡರ್ ಬಿಡುಗಡೆ
ಇಂಡಿ : ಪ್ರತಿ ವರ್ಷದಂತೆ ಈ ವರ್ಷವು ತಾಂಬಾ ಗ್ರಾಮದ ಆರಾಧ್ಯ ದೇವರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದೇವಸ್ಥಾನ ಕಮಿಟಿ ವತಿಯಿಂದ ಮಾಹಾಶಿವರಾತ್ರಿ ಉತ್ಸವ ಜರಗಿತು. ಈ ಉತ್ಸವದ ಕೇಂದ್ರ ಬಿಂದು ಮಲ್ಲಿಕಾರ್ಜುನ ಕರ್ತೃ ಲಿಂಗಕ್ಕೆ ರುದ್ರಾಭಿಷೇಕ ಹಾಗೂ ರಂಗೋಲಿಯಲ್ಲಿ ಶಿವನ ಚಿತ್ರ ಬಿಡಿಸಿ ನಂತರ ಬಂತನಾಳದ ಡಾ || ವೃಷಭಲಿಂಗ ಮಾಹಾಶಿವಯೋಗಿಗಳು ದೀಪ ಬೆಳಗಿದರು. ಶ್ರೀ ಗಳ ಆಶೀರ್ವಚನದೊಂದಿಗೆ ಈ ವರ್ಷದ ಮಲ್ಲಿಕಾರ್ಜುನ ಸ್ವಾಮಿ ಭಾವಚಿತ್ರ ಇರುವ ಕ್ಯಾಲೆಂಡರನ್ನು ಶ್ರೀ ಗಳು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಶಿವರಾಜ್ ಕೆಂಗನಾಳ ಪ್ರಸ್ತಾವಿಕ ಮಾತನಾಡಿದರು, ಈ ಸಮಯದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಕಮಿಟಿ ಕಾರ್ಯದರ್ಶಿ ಗೋಪಾಲ ಅವರಾಧಿ, ಉಪಾಧ್ಯಕ್ಷ ಸಿದ್ದು ದಿವಟಗಿ, ಸದಸ್ಯ ಮಂಜುನಾಥ ನಾವಿ, ನಾಗರಾಜ ಮಾಳಿ, ಸುಮಿತ ಕಂಬಾರ, ಸಿದ್ದರಾಯ ದಿವಟಗಿ, ಚಿದಾನಂದ ಕೆಂಗನಾಳ, ಸಾಗರ ಅವರಾಧಿ, ಸಂಜೀವ ಜೇವುರ, ಶಿಕ್ಷಕರಾದ ಅಡಿವೆಪ್ಪ ಸರಸಂಬಿ ಸರ್ , ಕೂಡಕ್ಕಲಗಿ ಸರ್, ವಗಮಂಡಿ ಸರ್, ಸೋಮನಿಂಗ ಸರ್ ತಾಂಬಾ ಗ್ರಾಮದ ಭಕ್ತರು ತಾಯಂದಿರು ಭಾಗವಹಿಸಿದ್ದರು.