ಇಂಡಿ : ಲಕ್ಷಾಂತರ ಮಕ್ಕಳ ಶಿಕ್ಷಣ ಭವಿಷ್ಯಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ವಿತರಿಸದೇ ಅಧಿಕಾರಿ ವರ್ಗ ಕಪ್ಪು ಚುಕ್ಕೆಯಾಗಿನಿಂತಿದೆ. ಮಕ್ಕಳ, ಮಹಿಳೆಯರ, ನಿರುದ್ಯೋಗಿ ಯುವಕರ, ಶೋಷಿತ ಬಡ ರೈತ ಜನರ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಬೇಕಾಗಿದ್ದ ಅಧಿಕಾರಿ ವರ್ಗ ಎಲ್ಲವೂ ಮರೆತಂತ್ತೆ ಕಾಣುತ್ತದೆ.
ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶದಂತೆ ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ವಿತರಿಸಿ ಸಾಂವಿಧಾನಿಕ ಸಾಮಾಜಿಕ ನ್ಯಾಯದ ಹಕ್ಕು ರಕ್ಷಣೆ ಮಾಡಬೇಕಾಗಿತ್ತು ಎಂದು ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಅಮೀತ .ಎ.ಕೆ. ಮಾಹಿತಿ ನೀಡಿದರು.
ಇತ್ತೀಚೆಗೆ ರಾಜ್ಯ ಸರಕಾರ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿದ್ದು, ತಳವಾರ ಸಮಾಜದ ಅಭ್ಯರ್ಥಿಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶದಂತೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ವಿತರಿಸಿ ನೇಮಕಾತಿಯಲ್ಲಿ ಮೀಸಲಾತಿ ಅವಕಾಶ ಕಲ್ಪಿಸಬೇಕೆಂದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕು ಉಪ ವಿಭಾಗ ಅಧಿಕಾರಿಗಳ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿ ಪತ್ರಿಕಾ ಪ್ರಕಟಣೆಗೆ ಮಾಹಿತಿ ನೀಡಿ ಸರಕಾರದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಕೇಂದ್ರ ಸರಕಾರ 20-03-2020 ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿ ಗೆಜಟ್ ಹೊರಡಿಸಿದೆ. ಅದರಂತೆ ರಾಜ್ಯ ಸರಕಾರವೂ ಕೂಡಾ 28-05-2020 ರಂದು ರಾಜ್ಯ ಪತ್ರ ಹೊರಡಿಸಿ ಈ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ವಿತರಿಸಲು ಸರಕಾರ ಸೂಚಿಸಿದೆ. ಆದರೆ ಅಧಿಕಾರಿ ವರ್ಗ ಮಾತ್ರ ಪಲಾಯನ ಮಂತ್ರ ಜಪಿಸುತ್ತ ಸುಳ್ಳಿನ ಕಂತೆ ಕಟ್ಟುತ್ತಾರೆ . ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸುತ್ತೊಲೆ ಗೊಂದಲವಿದೆ. ಸ್ವಷ್ಟಿಕರಣಕ್ಕಾಗಿ ಜಿಲ್ಲಾ ಅಧಿಕಾರಿಗಳಿಗೆ ಪತ್ರ ಬರೆದಿದ್ದೆವೆ ಎಂದು ಹೇಳತ್ತಾ ಶೋಷಿತ ಜನರ ಶ್ರಮ ಸಮಯ ಹಣ ಎಲ್ಲವೂ ಹಾಳು ಮಾಡುತ್ತಾ ನಮ್ಮ ಸಮುದಾಯದ ಜನರಿಗೆ ಶೋಷಣೆ ಮಾಡುತ್ತಾರೆ ಎಂದು ಆರೋಪ ಮಾಡಿದರು.
ಇನ್ನೂ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶಾಲಾ ದಾಖಲಾತಿ, ಸ್ಥಳ ಪರಿಶೀಲನೆ ಮತ್ತು ಸರಕಾರ ಸುತ್ತೊಲೆ, ಗೆಜಟ್ , ಮಾರ್ಗಸೂಚಿ ಪಾಲಿಸದೇ ಕಛೇರಿಯಲ್ಲಿ ಕುಳಿತುಕೊಂಡು ಸಕಾರಣ ನೀಡದೆ ಅರ್ಜಿಗಳನ್ನು ತಿರಸ್ಕರಿಸುತ್ತಾರೆ. ಇದೊಂದು ದುರದ್ದೇಶಪೂರ್ವಕ, ಬೇಜವಾಬ್ದಾರಿಯುತವಾಗಿ ಕಾನೂನಿನ ವಿರುದ್ದವಾಗಿ ನಡೆದುಕೊಳ್ಳುದರ ಜೊತೆಗೆ ಶೋಷಿತ ಸಮುದಾಯದ ಮೇಲೆ ದೃಷ್ಯ ಕೃತ್ಯ ಎಸಗಿದಂತಾಗುತ್ತೆದೆ ಎಂದು ಹೇಳಿದರು.
ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರ ಶೋಷಿತರ ಪರವಾಗಿ ಇದ್ದೆವೆ ಎಂದು ಸಬಕಾ ಸಾಥ್, ಸಬಕಾ ವಿಕಾಸ , ಸಬಕಾ ವಿಶ್ವಾಸ, ಸಬಕಾ ಪ್ರಯಾಸ್ ದೊಂದಿಗೆ ಶೋಷಿತ ವರ್ಗಗಳ ಸಬಲೀಕರಣಕ್ಕಾಗಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸರಕಾರದ ಯೋಜನೆ ಗಳು ತಲುಪಬೇಕು ಮತ್ತು ಮುನ್ನಲೆಗೆ ತರುವ ಮಹತ್ತರ ಜವಾಬ್ದಾರಿ ಸರಕಾರದ ಗುರಿಯಾಗಿದೆ. ಆದರೆ ಸಂವಿಧಾನ ಬದ್ದವಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಉತ್ತೀರ್ಣ ಹೊಂದಿ ಸಮಾನತೆ ಸಾರುವ, ಕಾನೂನು ರಕ್ಷಿಸುವ ಜವಾಬ್ದಾರಿ ಹೊಂದಿದ ಅಧಿಕಾರಿ ವರ್ಗ, ಏನನ್ನೂ ಅರಿಯದಂತೆ ಪಲಾಯನ ಮಾಡೊದು ನ್ಯಾಯವೇ ? ಕೇಂದ್ರ ಹಾಗೂ ರಾಜ್ಯ ಸರಕಾರ ಆದೇಶದಲ್ಲಿ ತಳವಾರ ಮತ್ತು ಪರಿವಾರ ಎಂಬುದು ನಾಯಕ/ನಾಯ್ಕಡ ಪದಗಳ ಪರ್ಯಾಯ ಪದ ಎಂದು ಸ್ವಷ್ಟವಾಗಿ ತಿಳಿಸಲಾಗಿದೆ.
ಆದರೂ ಅಧಿಕಾರಿಗಳು ತಳವಾರ ಮತ್ತು ಪರಿವಾರ ಎಂಬುದು ನಾಯಕ/ನಾಯ್ಕಡ ಸಮುದಾಯದಿಂದ ಪ್ರತ್ಯೇಕಿಸಿ ನೋಡುವ ಕುತಂತ್ರ ಮಾಡುತ್ತಿದ್ದಾರೆ. ಸರಕಾರದ ಆದೇಶಾನುಸಾರ ತಳವಾರ ಮತ್ತು ಪರಿವಾರ ಎಂಬುದು ನಾಯಕ/ನಾಯ್ಕಡ ಸಮುದಾಯಗಳೇ ಆಗಿವೆ. ಆದರೆ ಪರ್ಯಾಯ ಪದ ಎಂದರೇ ಒಂದೇ ಎಂದರ್ಥಲ್ಲವೇ ? ಹಾಗಿದ್ದ ಮೇಲೆ ಪ್ರತ್ಯೇಕಿಸಿ ನೋಡುವ ಪ್ರಮೇಯೆ ಎಲ್ಲಿಯದು ? ಇದೊಂದು ದುರದ್ದೇಶ ನಡೆಯಲ್ಲದೇ ಮತ್ತೇನು ? ತಳವಾರ ಮತ್ತು ಪರಿವಾರ ನಾಯಕ/ನಾಯ್ಕಡ ಸಮುದಾಯಕ್ಕೆ ಸೇರಿಲ್ಲವೆಂದ ಮೇಲೆ ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನಾದರೂ ಒದಗಿಸಬೇಕಲ್ಲವೇ ? ತಳವಾರ ಸಮುದಾಯವರು ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿಸಲ್ಲಿಸಿದಾಗ ಏಕಾಏಕಿ ನೀವು ಎಸ್.ಟಿಗೆ ಅರ್ಹರಲ್ಲ ಎಂದು ಒಮ್ಮುಖವಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರಿಗಳು, ಆ ಜಾತಿ ಯಾವ ಪಂಗಡಕ್ಕೆ ಸೇರಿದೆ ಎಂಬುದನ್ನು ದಾಖಲೆ ಸಹಿತ ಸ್ಪಷ್ಟಪಡಿಸಬೇಕು.
ಇಲ್ಲವಾದಲ್ಲಿ ಈ ಬಗ್ಗೆ ಕ್ರಾಂತಿಕಾರಿ ಹೋರಾಟದ ಜೊತೆಗೆ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ನ್ಯಾಯಲಯದ ಮೋರೆ ಹೋಗುವುದರ ಜೊತೆಗೆ ವ್ಯಯಕ್ತಿಕವಾಗಿ ದೂರು ದಾಖಲಿಸಬೇಕಾಗುತ್ತೆದೆ. ಅದರಂತೆ ಶಿಕ್ಷಕರ ನೇಮಕಾತಿಯಲ್ಲಿ ಪರಿಶಿಷ್ಟ ಪಂಗಡದ ಅಡಿಯಲ್ಲಿ ಅರ್ಜಿಸಲ್ಲಿಸಲು ಅವಕಾಶ ಮಾಡಿಕೊಡಬೇಕು ಇಲ್ಲವಾದಲ್ಲಿ ಶಿಕ್ಷಕರ ನೇಮಕಾತಿಯ ಆದೇಶದ ಸ್ಟೇ ಮಾಡಲು ನ್ಯಾಯಾಲಯದ ಮೋರೆ ಹೋಗತ್ತೆವೆ. ಆ ಕಾರಣಕ್ಕಾಗಿ ದಯಾಳುಗಳು ಸಂವಿಧಾನ ಬದ್ದವಾಗಿ ಬಂದ ಹಕ್ಕನ್ನು ನಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಒದಗಿಸಬೇಕೆಂದು ಮನವಿ ಮಾಡಿಕೊಂಡರು.