ಇಂಡಿ : ತಾಲ್ಲೂಕಿನ, ಜಿಲ್ಲೆಯ ಹಾಗೂ ನಾಡಿನ ಅಭಿವೃದ್ಧಿಗಾಗಿ ಸತತವಾಗಿ 3 ನೇ ಬಾರಿ ಆಯ್ಕೆಯಾದ ಅಪಾರ ಅನುಭವ ಹೊಂದಿರುವ ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ವಿ ಪಾಟೀಲ ಅವರಿಗೆ ಸಚಿವ ಸ್ಥಾನ ಕೊಡಬೇಕೆಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಇಂಡಿ ಹಾಗೂ ಬಳ್ಳೊಳ್ಳಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಜಾವೀದ ಮೋಮಿನ್ ಹಾಗೂ ಕಲ್ಲನಗೌಡ ಬಿರಾದಾರ ಮಂಗಳವಾರ ಆಗ್ರಹಿಸಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾತಾನಾಡಿದ ಅವರು, ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿಯವರೆಗೆ ಇಂಡಿ ಮತಕ್ಷೇತ್ರ ಸಚಿವ ಸ್ಥಾನದಿಂದ ವಂಚಿತೆಗೊಂಡಿದೆ. ಈ ತಾಲ್ಲೂಕು ನಂಜುಂಡಪ್ಪ ವರದಿಯಂತೆ ಸಂಪೂರ್ಣವಾಗಿ ಹಿಂದುಳಿದಿದೆ. ಈ ಪ್ರದೇಶ ಹಾಗೂ ನಾಡಿನ ಅಭಿವೃದ್ಧಿಗಾಗಿ ವಿಶೇಷ ಅನುಭವ ಹೊಂದಿರುವ ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿನ ಸ್ಥಾನ ನೀಡಬೇಕು. ಈಗಾಗಲೇ ತಾಲ್ಲೂಕಿನ ಬಹುತೇಕ ಅಭಿವೃದ್ಧಿ ಕಾರ್ಯಗಳಲ್ಲಿ ಹೊಸ ಸ್ಪರ್ಷ ನೀಡಿದ್ದಾರೆ. ಸುಮಾರು ವರ್ಷಗಳಿಂದ ನನೆಗುದ್ದಿಗೆ ಬಿದ್ದಿರುವ ರೈತರ ಹಿತ ಕಾಪಾಡಲು ಭೀಮಾಶಂಕರ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದ್ದಾರೆ. ಇಂಡಿಯಲ್ಲಿ ಶೈಕ್ಷಣಿಕ ಕ್ರಾಂತಿಗಾಗಿ ಈ ಭಾಗದ ವಿಧ್ಯಾರ್ಥಿಗಳಿಗಾಗಿ ವಿಶೇಷ ಕಾಳಜಿ ವಹಿಸಿ , ಸರಕಾರಿ ಪದವಿ ಪೂರ್ವ, ಪದವಿ, ಐಟಿಐ ಹಾಗೂ ಡಿಪ್ಲೊಮಾ ಇನ್ನಿತರ ಕೊರ್ಸುವುಗಳುಳ್ಳ ಕಾಲೇಜು ತಂದಿದ್ದು ಇಲ್ಲಿಯ ವಿಧ್ಯಾರ್ಥಿಗಳಿಗೆ ಬಹಳ ಸಹಕಾರಿಯಾಗಿದೆ. ಬಹುಕಾಲದಿಂದ ಈ ತಾಲ್ಲೂಕಿನ ಜನರು ಸಚಿವ ಸ್ಥಾನ ನೀರಿಕ್ಷೆಯಲ್ಲಿದ್ದಾರೆ. ಹಾಗಾಗಿ ಜನಪರ ಕಾಳಜಿವುಳ್ಳ ಅಪಾರ ಅನುಭವ, ಜ್ಞಾನ ಹೊಂದಿರುವ ಈ ರಾಜ್ಯದ ಹಿತಕ್ಕಾಗಿ ಸಚಿವ ಸ್ಥಾನ ಕೋಡಲೇಬೇಕು. ಒಂದು ವೇಳೆ ನಿರಾಸೆ ಮೂಡಿಸಿದರೆ ಹೋರಾಟಕ್ಕೆ ಅಣಿಯಾಗಬೇಕಾಗುತ್ತೆದೆ. ಅದಕ್ಕೆ ಪಕ್ಷದ ವರಿಷ್ಠರು ಅವಕಾಶ ಮಾಡಿಕೊಡುವುದಿಲ್ಲ ಎಂಬ ನಂಬಿಕೆ ಕೂಡಾ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಶಾಂತ ಕಾಳೆ, ಇಲಿಯಾಸ್ ಬೊರಾಮಣಿ, ಸುಬಾಸ್ ಬಾಬರ್, ಸದಾಶಿವ ಪ್ಯಾಟಿ, ಅಬ್ಜಲ್ ಹವಾಲ್ದಾರ್, ಸುದೀರ ಕರಕಟ್ಟಿ, ಸತೀಶ ಕುಂಬಾರ, ಯಮುನಾಜಿ ಸಾಳಂಕೆ, ಪುಂಡಲೀಕ ಹೂಗಾರ, ಮಹೇಶ ಹೊನ್ನಬಿಂದಗಿ, ಮಾಜಿದ್ ಸೌದಾಗಾರ, ಪರಶುರಾಮ ಹತ್ತರಕಿ, ಹಮೀದ ಮುಲ್ಲಾ, ಗಣಪತಿಗೌಡ ಬಿರಾದಾರ, ನಿಂಗಪ್ಪ ನಾಟೀಕಾರ ಉಪಸ್ಥಿತರಿದ್ದರು.