ಕಲಿಕೆಯ ಜೊತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವವನ್ನು ನೀಡಿ : ಎಂ ಆರ್ ಮಂಜುನಾಥ್
ಹನೂರು : ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೇಹ ಮತ್ತು ಮನಸ್ಸು ಹತೋಟಿಯಲ್ಲಿರುತ್ತದೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಪ್ರೇರೇಪಿಸಿ ಉತ್ತಮ ದೈಹಿಕ ಶಿಕ್ಷಣ ನೀಡಿ ತಾಲ್ಲೂಕು ಮಟ್ಟದಲ್ಲಿ ಮಕ್ಕಳ ಕ್ರೀಡಾಕೂಟವನ್ನು ಏರ್ಪಡಿಸಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದು ಶಾಸಕ ಎಂ ಆರ್ ಮಂಜುನಾಥ್ ತಿಳಿಸಿದರು .
ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ ಹನೂರು ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟ 2024-2025 ರ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವ ಮೂಲಕ ಹಾಗೂ ಗುಂಡು ಎಸೆಯುವುದರ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದ ಅವರು ದೇಹ ಮತ್ತು ಮನಸ್ಸು ಒಂದೇ ಕಡೆ ಕೂತು ನಿಲ್ಲಬೇಕಾದರೆ ಶಾಲೆಯ ದೈಹಿಕ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ.ಕ್ರೀಡೆಯು ಶಿಸ್ತಿನಿಂದ ಕೂಡಿದೆ ಎಲ್ಲಾರು ಪಾಲ್ಗೊಂಡರೆ ಮನಸಿಗೆ ನೆಮ್ಮದಿ ಸಿಗುತ್ತದೆ ಕ್ರೀಡೆ ಮತ್ತು ವಿದ್ಯೆಗಳೆರಡಕ್ಕೂ ಸಮಾನ ಅವಕಾಶ ನೀಡಬೇಕು, ಇಂತಹ ಮಕ್ಕಳ ಕಲಿಕೆಯಲ್ಲಿ ದೈಹಿಕ ಶಿಕ್ಷಕರ ಪಾತ್ರ ಬಹಳ ದೊಡ್ಡದಿದೆ, ಕಳೆದ ಸಾಲಿನಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಅಲಂಕಾರ ಮಾಡುವಲ್ಲಿ ನಮ್ಮ ಹಳ್ಳಿಗಾಡಿನ ಮಕ್ಕಳ ಪಾತ್ರ ದೊಡ್ಡದಿದೆ , ನಮ್ಮಲ್ಲಿ ಕಡಿಮೆ ಮಕ್ಕಳಿದ್ದಾರೆ ಅಂತಹವರನ್ನು ಗುರುತಿಸಿ ಮುಂದಿನ ಪೀಳಿಗೆಗೆ ಸರ್ಕಾರಗಳಿಂದ ಹೆಚ್ಚು ಮಕ್ಕಳನ್ನು ಪ್ರೋತ್ಸಾಹ ನೀಡಬೇಕು, ಕಳೆದ ಬಾರಿಯ
ರಾಜ್ಯ ಮಟ್ಟಕ್ಕೆ ಸಾರೋಣಿ ರೋಜಾ,ಮತ್ತು ರೋಹಿಣಿ ಯವರು ತೃತಿಯ ಸ್ಥಾನ ಪಡೆದಿದ್ದರು ಎಂಬುದು ಸಂತೋಷದ ವಿಷಯವಾಗಿದ್ದೆ ಅದೇ ರೀತಿ ಪ್ರಸ್ತುತ ಸಾಲಿನಲ್ಲಿ ನಮ್ಮ ತಾಲೂಕಿನಿಂದ ರಾಜ್ಯಮಟ್ಟಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಹೋಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಇಒ ಗುರುಲಿಂಗಯ್ಯ , ಹನೂರು ಪಟ್ಟಣದ ಪಿ ಎಸ್ ಐ ಶಶಿಕುಮಾರ್ ,ಪಟ್ಟಣ ಪಂಚಾಯತಿ ಸದಸ್ಯರುಗಳಾದ ಹರೀಶ್ ಕುಮಾರ್ , ಸಂಪತ್ ಕುಮಾರ್, ಸೋಮಶೇಖರ್ ಸುದೇಶ್ ,ದೈಹಿಕ ಪರಿವೀಕ್ಷಕ ಮಾದೇವ್ , ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಚಾಮರಾಜನಗರ ಜಿಲ್ಲೆ