ಇಂಡಿ : ಬಡವರ, ದಿನದುರ್ಬಲರ, ರೈತರ, ಕಾರ್ಮಿಕರ, ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಜೆಡಿಎಸ್ ಘೋಷಿತ ಅಭ್ಯರ್ಥಿ ಬಿ.ಡಿ.ಪಾಟೀಲ ಹೇಳಿದರು.
ತಾಲ್ಲೂಕಿನ ಸ್ವ ಗ್ರಾಮ ಹಂಜಗಿಯಲ್ಲಿ ಪಂಚರತ್ನ ಪ್ರಾಚಾರ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಸನ್ಮಾನ ಸ್ವೀಕರಿಸಿದರು. ತದನಂತರ ಮಾತಾನಾಡಿದ ಅವರು, ಗ್ರಾಮದ ಸರ್ವಸಮಾಜದ ಜನರು ಸೇರಿದಕ್ಕೆ ನಿಮ್ಮ ಪ್ರೀತಿ ಅಭಿಮಾನಕ್ಕೆ ಒಂದು ಸೇವೆ ಮಾಡಲು ಅವಕಾಶ ಮಾಡಿಕೋಡಿ ಎಂದರು. ಯಾವಜನ್ಮದ ಋಣವೂ ಏನು ಗೋತ್ತಿಲ್ಲ, ತಾಲೂಕಿನ ಪ್ರತಿ ಗ್ರಾಮದಲ್ಲೂ ಸ್ವ ಗ್ರಾಮದಂತೆ ಜನರು ಅಭಿಮಾನ ತೋರಿಸುತ್ತಿದ್ದಾರೆ. ಆದರೆ ಈ ಬಾರಿ ನನ್ನೂರಿನ ಸರ್ವ ಸಮಾಜ ದೈವದ ಜನರು ನನಗೆ ಬೆಂಬಲಿಸಿ ಆರ್ಶಿವಾದ ನೀಡಬೇಕು ಎಂದು ವಿನಂತಿ ಮಾಡುತ್ತೇನೆ.
ಈ ಸಂದರ್ಭದಲ್ಲಿ ಸಾನಿಧ್ಯ ವಹಿಸಿ ವೇದ ಮೂರ್ತಿ ಪಿಂಟು ಹಿರೇಮಠ ಮಾತನಾಡುತ್ತಾ ಬಿ ಡಿ ಪಾಟೀಲರು ನಮ್ಮ ಊರಿನ ಪ್ರಾಮಾಣಿಕ ವ್ಯಕ್ತಿಯಾಗಿದ್ದು , ಸುಮಾರು 25 ವರ್ಷಗಳಕಾಲ ಬಡವರ, ರೈತರ, ವೃದ್ದರ ಸೇವೆ ಸಲ್ಲಿಸಿದ್ದಾರೆ. ವಿಶೇವಾಗಿ ಇವರು ಸರ್ವ ಸಮಾಜ ಪ್ರೀತಿಗೆ ಪಾತ್ರರಾಗಿದ್ದಾರೆ. ಹಿಂತಹ ವ್ಯಕ್ತಿಗೆ ಜಾತಿ,ಮತ,ಯಾವ ಪಕ್ಷ ಬೇದ ಮಾಡದೇ ಬೆಂಬಲಿಸಿ ಎಂದು ಹೇಳಿದರು.
ವೇದಿಕೆಯಲ್ಲಿ ಅಯೋಬ ನಾಟೀಕರ, ಮರೇಪ್ಪ ಗಿರಣಿವಡ್ಡರ, ಎಮ್ ಎಮ್ ಪಟೇಲ್, ಮೌಲಾನ ಸಲಿಂ, ಚಿಕ್ಕಯ್ಯ ಹಿರೇಮಠ, ಹಸಲಾಲ ತಾಂಬೆ, ಈರಪ್ಪ ಮಾಳಗೆ, ಲಾಲಸಾಬ ಚೌದ್ರಿ, ಮೌಲಾಸಾಬ ಅತ್ನೂರ, ಮಕ್ಬುಲ ವಾಲಿಕಾರ, ಅಣ್ಣಪ್ಪ ಕೋಟ್ಟಲಗಿ, ರಾಮ ಕೋಟಲಗಿ, ತಮ್ಮಣಗೌಡ ಬಿರಾದಾರ, ಈರಪ್ಪಗೌಡ ಬಿರಾದಾರ, ಕುಮಾರಗೌಡ ಬಿರಾದಾರ, ಬಾಕ್ಸರಸಾಬ ಕುಣಬಿ, ಹುಸೇನಸಾಬ ಸೈಯದ್, ಹಬ್ಬುಸಾಬ, ಜಮಖಂಡಿ, ಮಳಸಿದ್ದ ಜಾಡರ, ಖಾಜಣ ಕಾರಬಾರಿ, ಹುಸೇನಿ ಕಾರಬಾರಿ, ಮುಂತಾದ ನಾಯಕರು ಉಪಸ್ಥಿತರಿದ್ದರು.