ಮಸ್ಕಿ : ಮಸ್ಕಿ ಪಟ್ಟಣದಲ್ಲಿ ಹತ್ತನೇ ತರಗತಿ
ವಿದ್ಯಾರ್ಥಿಯನ್ನು ಚಾಕುವಿನಿಂದ ಹೊಟ್ಟೆಗೆ ತಿವಿದು,
ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಘಟನೆ
ನಡೆದಿದ್ದು ಪಟ್ಟಣದ ಜೋಗಿನ್ ರಾಮಣ್ಣ ಶಾಲೆಯಲ್ಲಿ 10 ನೆ ತರಗತಿ ಓದುತ್ತಿದ್ದ ಬಾಲಕಿ ಕೊಲೆಯಾಗಿದ್ದಾಳೆ. ಬಾಲಕಿಯ ಕೊಲೆ ಮಾವನೆ ಮಾಡಿದ್ದಾನೆ ಅಂತ ಬಾಲಕಿಯ ಕುಟುಂಬದವರು ಆರೋಪಿಸುತ್ತಿದ್ದಾರೆ. ಹುಡುಗಿಯ ಮಾವ ಬೆಂಗಳೂರಿನಿಂದ ಬೆಳಿಗ್ಗೆ ಆಗಮಿಸಿದ್ದು, ಹುಡುಗಿಯನ್ನು ಶಾಲೆಯಿಂದ ಕರೆದುಕೊಂಡು ಬರುತ್ತೇನೆ ಎಂದು ಬಾಲಕಿಯ ಮನೆಯಿಂದ ಸ್ಕೂಟಿ ತೆಗೆದುಕೊಂಡು ಹೋಗಿ ಶಾಲೆಯಿಂದ ನೇರವಾಗಿ ಊರ ಹೊರಗಡೆಯ ಹೋಲಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬಾಲಕಿಯ ಹೊಟ್ಟೆಗೆ ಚಾಕುವಿನಿಂದ ತಿವಿದಿದ್ದಾನೆ.
ಬಾಲಕಿ ಓಡಿ ರೋಡಿಗೆ ಬಂದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಈ ವೇಳೆ ಬೆನ್ನಹಟ್ಟಿ ಬಂದು ಕುತ್ತಿಗೆ ಬಾಗಕ್ಕೆ ಚಾಕುವಿನಿಂದ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತದೆ. ಇನ್ನೂ ಹುಡುಗಿಯನ್ನು ಬೇಟಿ ಆಗಲು ಹೋಗುವಾಗ ಆರೋಪಿಯು ಚಾಕಲೇಟ್, ವಿಷದ ಬಾಟಲಿ ಮತ್ತು ಚಾಕು ತೆಗೆದುಕೊಂಡು ಹೋಗಿದ್ದ ಎನ್ನಲಾಗುತ್ತಿದೆ. ಕೊಲೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಇತ್ತ ಬಾಲಕಿಯ ಮನೆಯಲ್ಲಿ ಪಾಲಕರ ಆಕ್ರಂದನ
ಮುಗಿಲುಮಟ್ಟಿದೆ. ಇನ್ನೂ ಮಸ್ಕಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ
ಪೊಲೀಸರು ಬಲೆ ಬೀಸಿದ್ದಾರೆ.