ಇಂಡಿ : ಶ್ರೀ ಗಂಗಲಿಂಗ ಮಹಾರಾಯರು ಭಕ್ತರ ಪಾಲಿನ ಕಾಮಧೇನು. ಭೀಮಾತೀರದಲ್ಲಿ ಹಲವಾರು ಪವಾಡಗಳನ್ನು ಮಾಡಿ ಭಕ್ತರನ್ನು ಉದ್ದಾರ ಮಾಡಿದ ಮಹಿಮಾಶಾಲಿ ಎಂದು ಜೆಡಿಎಸ್ ಮುಖಂಡ ಬಿ.ಡಿ ಹೇಳಿದರು.
ತಾಲೂಕೀನ ಗುಬ್ಬೇವಾಡ ಗ್ರಾಮದ ಪವಾಡ ಪುರುಷ ಶ್ರೀ ಗಂಗಲೀಂಗ ಮಾರಾಯರ ಜಾತ್ರಾ ಮಹೋತ್ಸವದ ಅಂಗವಾಗಿ ಧರ್ಮ ಸಭೆಯನ್ನು ಉದ್ಘಾಟಿಸಿ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಹೇಳಿದರು. ಶ್ರೀ ಗಂಗಲೀಂಗ ಮಾರಾಯರು ಭಕ್ತರ ಪಾಲಿನ ಕಾಮಧೇನು ಕಲ್ಪವೃಕ್ಷರಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತಮ್ಮದೆಯಾದ ಭಕ್ತಕುಲವನ್ನು ಹೋಂದಿದ್ದಾರೆ. ವಿಶೇಷ ಪವಾಡಗಳನ್ನು ಮಾಡಿ ಕಷ್ಟದಲ್ಲಿ ಇದ್ದ ಭಕ್ತರನ್ನು ಸಮಸ್ಯೆಗಳಿಂದ ಮುಕ್ತಿ ನೀಡಿದ್ದಾರೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ಸೋಮಣ್ಣ ಮಾಹಾರಾಯ, ಬಸಣ್ಣ ಮಹಾರಾಯ ವಹಿಸಿದ್ದರು. ಗ್ರಾಮದ ಹಿರಿಯರು ಪಂಚಪ್ಪ ಸಾಹುಕಾರ ಮರಗೂರ, ಸುರೇಶ್ ಆಲೂರ, ಶಿವರಾಯಗೌಡ ಮರಗೂರ, ಸಿದ್ರಾಮಪ್ಪಗೌಡ ಮರಗೂರ, ಶಾಂತಗೌಡ ಆಳೂರ, ಅಮರುತ್ತಗೌಡ ಮರಗೂರ, ಲಕ್ಷ್ಮಿಕಾಂತ್ ಮರಗೂರ, ಕಾಶಿನಾಥ್ ಜೇವೂರ, ಶಿವಲಿಂಗಪ್ಪ ಲಚ್ಚ್ಯಾಣ, ಶಾಂತಯ್ಯ ಪತ್ರಿಮಠ, ಮಲ್ಲಿಕಾರ್ಜುನ ಲಿಂಗಳಿ,ಕಾಶಿನಾಥ್ ಲಚ್ಚ್ಯಾಣ, ಲಕ್ಷ್ಮಣ ಕೋಳಿ, ಅಲ್ಲಾಭಕ್ಷ ಗುಬ್ಬೇವಾಡ, ಹಾಗೂ ಮುಂತಾದ ನಾಯಕರು ಉಪಸ್ಥಿತರಿದ್ದರು.