ರಾಯಚೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಡೊಂಗ ರಾಂಪೂರು, ಆತಕುರ್ ಗ್ರಾಮ ಪಂಚಾಯತ್‌ನಲ್ಲಿ ರಂಗಸಿರಿ ಸಾಂಸ್ಕೃತಿಕ ಕಲಾ ಬಳಗ ರಾಯಚೂರು ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಂಯುಕ್ತಾ ಶ್ರದಲ್ಲಿ, ಗ್ರಾಮ ಪಂಚಾಯತ ಕಾರ್ಯಾಲಯ ಆತಕುರ್ ಇವರ ಸಹಕಾರದೊಂದಿಗೆ ೭೫ ಭಾರತ ಸ್ವಾತಂತ್ರ ಅಮೃತೋತ್ಸವದ ಸವಿನೆನಪು ಅಂಗವಾಗಿ ಗಡಿನಾಡು ಸಾಂಸ್ಕೃತಿಕ ಉತ್ಸವ, ಸಂಗೀತ, ನೃತ್ಯ, ನಾಟಕ ಕಾರ್ಯಕ್ರಮ ಆಯೋಜಿಸಲಾಗಿತ್ತು.ಬಿಜೆಪಿ ಗ್ರಾಮಾಂತರ ಅಧ್ಯಕ್ಷರಾದ ಡಿ.ಅಚ್ಚುತ್ತಾರೆಡ್ಡಿ ಅವರು ಉದ್ಘಾಟಿಸಿ ಮಾತನಾಡುತ್ತಾ, ಗಡಿನಾಡು ಭಾಗಗಳಲ್ಲಿ ಮಕ್ಕಳು ಮತ್ತು ಜನರು ಬೇರೆ ಭಾಷೆಗಳು ಪ್ರಭಾವಕ್ಕೆ ಒಳಗಾಗದೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸವುದು ಪ್ರತಿಯೊಬ್ಬರ ಕರ್ತವ್ಯ. ಕನ್ನಡ ಭಾಷೆ ಮೇಲೆ ಅಭಿಮಾನ ಬೆಳಿಸಿಕೊಳ್ಳುವುದರ ಜೊತೆಗೆ ನಮ್ಮ ಅಭಿವೃದ್ಧಿ ಸಾಧ್ಯ. ಸ್ಥಳೀಯ ಪ್ರತಿಭೆಗಳು , ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯವೆಂದರು. ಅನೇಕ ವರ್ಷಗಳಿಂದ ನಾಟಕ ಇನ್ನಿತರ ಕಲೆಗಳನ್ನು ನಿರಂತರವಾಗಿ ಮಾಡುತಿದ್ದಾರೆ. ಈ ನಮ್ಮ ಗಡಿ ಭಾಗದಲ್ಲಿ ಸಾಂಸ್ಕೃತಿಕಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ರಂಗಸಿರಿ ಸಾಂಸ್ಕೃತಿಕ ಕಲಾ ಬಳಗ ಕಾರ್ಯ ಶ್ಲಾಘನೀಯವೆಂದರು. ಗ್ರಾಮ ಪಂಚಾಯತ್ ಸದಸ್ಯರಾದ ಬಿ.ಟಿ.ದೇವಪ್ಪ ಮಾತನಾಡಿ, ಈ ಗಡಿನಾಡು ಭಾಗದಲ್ಲಿ ಸಂಗೀತ, ನೃತ್ಯ, ನಾಟಕ, ಗಡಿನಾಡು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂತಹ ರಂಗಭೂಮಿ ಕಲೆಗಳು ಉಳಿಯಬೇಕಾದರೆ ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದರು.ಹಿರಿಯ ರಂಗಭೂಮಿ ಕಲಾವಿದ ಅನಿವೀರಯ್ ಸ್ವಾಮಿ ಶಕ್ತಿನಗರ ಇವರು ಮತನಾಡಿ. ಇಂತಹ ಕಲೆಗಳು ಬೆಳೆಯಬೇಕಾದರೆ ಕಲಪೋಷಕರು ಅವಶ್ಯಕತೆ ಇದೆ. ಈ ಕಾರ್ಯಕ್ರಮ ಪ್ರತಿ ಹಳ್ಳಿಗಳಲ್ಲಿ ನಡಿಯುವಂತಾಗಲಿ ಎಂದು ಶುಭ ಕೋರಿದರು. ಈ ವೇದಿಕೆಯ ಮೇಲೆ ಸುರೇಶ ನಾಯಕ ಕಲಾವಲ್ ದೊಡ್ಡಿ, ಪಿಡಿಓ ರಮಾದೇವಿ. ಭೂ ಧಾನಿಗಾಳಾದ ವೆಂಕಟರೆಡ್ಡಿ, ಮುರಳಿ ಮೋಹಾನ್ ರೆಡ್ಡಿ, ಕೆ.ಗೋವಿಂಡರೆಡ್ಡಿ ಸರ್ಜಾಪೂರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರು ವೆಂಕಟ್ರಮಲೂ ಸರ್ಜಾಪುರ, ಗ್ರಾಮ ಪಂಚಾಯತ್ ಸದಸ್ಯರು ದತ್ತಪ್ಪ, ಕರೆಪ್ಪ, ಮೌನೇಶ್, ಎಸ್‌ಡಿಎಂಸಿ ಅಧ್ಯಕ್ಷರು. ಮೈಲಾಪ್ಪ ಮುಕ್ಕೋಪಾದ್ಯಾಯರು ಸರ್ಕಾರಿ ಪ್ರಾಥಮಿಕ ಶಾಲೆ ಡಿ ರಂಪೂರು ಇವರು ಮಾತನಾಡಿ, ಈ ಗಡಿಭಾಗದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ವಿದ್ಯಾರ್ಥಿಗಳು ಜನರಲ್ಲಿ ಮನವರಿಕೆ ಮಾಡಬೇಕು ಎಂದು ಹೇಳಿದರು.ಈ ನಮ್ಮ ಶಾಲೆಯಲ್ಲಿ ಗಡಿನಾಡು ಸಂಸ್ಕೃತಿ ಹಮ್ಮಿಕೊಂಡಿರುವುದು ರಂಗಸಿರಿ ಸಾಂಸ್ಕೃತಿಕಾ ಕಲಾ ಬಳಗ ಅಧ್ಯಕ್ಷರು ರಂಗಸ್ವಾಮಿ ಅವರಿಗೆ ಧನ್ಯವಾದಗಳು ಹೇಳುತ್ತೇನೆ ಎಂದು ಹೇಳಿದರು. ಇನ್ನಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗಡಿನಾಡು ಕಲಾವಿದರು ಕೆ.ಗೋವಿಂದರೆಡ್ಡಿ ಸರ್ಜಾಪುರ ಕವಿಗಳು, ಗಾಯಕರು, ರಂಗಭೂಮಿ ಕಲಾವಿದರು, ಬಾಬಣ್ಣ ಹುಗೆನಲ್ಲಿ ಬಯಲಾಟ ಕಲಾವಿದರು, ವೆಂಕಟ್ಟರೆಡ್ಡಿ ಗಾಜ್ರಲ್, ಬಯಲಾಟ ಕಲಾವಿದರು, ಈಶ್ವರಂ ಯಾಪಲದ್ದಿನ್ನಿ ಬಯಲಾಟ ಕಲಾವಿದರು, ಅಕ್ರಮ ಸಾಬ್ ಗಂಜಲ್ಲಿ, ಬಯಲಾಟ ಕಲಾವಿದರು, ವೆಂಕಟೇಶ ರಂಗಭೂಮಿ ಕಲಾವಿದರು, ಡಿ ರಾಂಪುರ ಹಾಗೂ ಬಡೆಸಾಬ್ ಡಿ ರಾಂಪುರ ರಂಗಭೂಮಿ ಕಲಾವಿದ ಇವರಿಗೆ ಸನ್ಮಾನಿಸಲಾಯಿತು.ನಂತರ ಸಂಗೀತ, ನೃತ್ಯ ಹಾಗೂ ವೆಂಕಟ ನರಸಿಂಹಲು ತಂಡದಿಂದ ನಾಟಕ, ದುರಾಶೆಯೇ ದುಃಖಕ್ಕೆ ಮೂಲ, ಅತ್ಯುತ್ತಮಗವಾಗಿ ಪ್ರದರ್ಶನಗೊಂಡು ಯಶಸ್ವಿಯಾಯಿತು. ಈ ಕಾರ್ಯಕ್ರಮ ನಿರೂಪಣೆ ವಿಜಯ್ ಲಕ್ಷೀ ಶಿಕ್ಷಕರು ಮಾಡಿದರು.