ಲಿಂಗಸೂಗೂರು: ತಾಲೂಕಿನ ನಾಗರಹಾಳ ಸರಕಾರಿ ಪ್ರೌಢ ಶಾಲೆಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನು ನಡೆಸಲಾಯಿತು. ಈ ವೇಳೆ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶಿವಬಸಪ್ಪ ಅಂಗಡಿ ಮಾತನಾಡಿ ಶಾಲೆಯ ಆವರಣದಲ್ಲಿರುವ ಗುಂಡು ಕಲ್ಲುಗಳನ್ನು ಕಿತ್ತಿ ಮೈದಾನವನ್ನು ಸುಸಜ್ಜಿತಗೊಳಿಸಬೇಕು. ಶಾಲೆಯ ಮುಖ್ಯಧ್ವಾರದ ಬಳಿಯಿರುವ ತಿಪ್ಪೆ ಗುಂಡಿಗಳನ್ನು ತೆರವುಗೊಳಿಸಬೇಕು. ಅಲ್ಲದೆ ಪ್ರೌಢ ಶಾಲೆಯ ಗಂಡು ಮಕ್ಕಳಿಗೆ ಶೌಚಾಲಯದ ಕೊರತೆ ಇದ್ದು, ಶೌಚಾಲಯವನ್ನು ನಿರ್ಮಿಸಿಕೊಡಬೇಕೆಂದು ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಗೌರಮ್ಮ ಅವರಿಗೆ ಮನವಿ ಮಾಡಿದರು.
ನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮಾತನಾಡಿ ನಮ್ಮ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಕೊಠಡಿಗಳ ಸಮಸ್ಯೆ ಇದೆ. ಬೇಗನೆ ಪರಿಹರಿಸಿ ಎಂದು ಅಭಿವೃಧ್ಧಿ ಅಧಿಕಾರಿಗಳಿಗೆ ಒತ್ತಾಯಿಸಿದರು. ಈ ವೇಳೆ ಗ್ರಾ.ಪಂ.ಅಭಿವೃಧ್ಧಿ ಅಧಿಕಾರಿ ಗೌರಮ್ಮ ಮಾತನಾಡಿ ಇನ್ನು ಸ್ವಲ್ಪ ದಿನಗಳಲ್ಲಿ ವಿವಿಧ ಶಾಲೆಗಳಲ್ಲಿರುವ ಸಮಸ್ಯೆಗಳಿಗೆ ಗ್ರಾ.ಪಂ.ವತಿಯಿಂದ ಸ್ಪಂದಿಸುವ ಕಾರ್ಯ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷರಾದ ಈರಮ್ಮ ಭೋವಿ, ವೈದ್ಯಾಧಿಕಾರಿ ಹೆಚ್.ಬಿ. ತಳ್ಳಳ್ಳಿ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ, ಗ್ರಾ.ಪಂ. ಸಿಬ್ಬಂದಿಗಳು ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಟ್ಟೆಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು. ಸದಾಶಿವ ಪ್ರಾರ್ಥನೆ ಮಾಡಿದರು. ಮಹಾಂತಪ್ಪ ವಂದಿಸಿದರು.