ಇಂಡಿ : ಕ್ಷಯ ರೋಗ ಮುಕ್ತ ಭಾರತಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯ ಪಡೆಯಿರಿ ಎಂದು ಇಂಡಿ ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಸ ಪ್ರಶ್ನೆ ಸ್ಪರ್ಧೆ ನಡೆಯಿತು. ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಸ್ಪರ್ಧೆ ಕಾರ್ಯಕ್ರಮಕ್ಕೆ ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳು ಡಾ. ಧಾರವಾಡಕರ ಚಾಲನೆ ನೀಡಿದರು.
ದೈಹಿಕ ಶಿಕ್ಷಣ ಸಹನಿರ್ದೇಶಕರು ಸಂಗಮೇಶ್ ಮಾತನಾಡಿ ಕೋವಿಡ್ ಮಹಾಮಾರಿ ಯುದ್ಧದ ಸಮರೋಪ ಸೇವೆಯೊಂದಿಗೆ ಪದವಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ಪರ್ಧಾತ್ಮಕ ಭಾವನೆ ಮೂಡಿಸಲು ಸಹಕಾರಿ ಆರೋಗ್ಯ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಆರೋಗ್ಯಧಿಕಾರಿ ಡಾ ಅರ್ಚನ ಕುಲಕರ್ಣಿ ವಹಿಸಿದರು.
ಇನ್ನೂ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಪ್ರಥಮ ವಿಜೇತರು ಎಸ ಆರ ಮಾಳಗಿ ಕಾಲೇಜ ತಾಂಬಾ ವಿದ್ಯಾರ್ಥಿಗಳಿಗೆ ಪ್ರಥಮ 1500 ರೂ. ದ್ವಿತೀಯ ವಿಜೇತರು ಎನ ಎಸ್ ಖೇಡ ಕಾಲೇಜು ಇಂಡಿ ವಿದ್ಯಾರ್ಥಿಗಳಿಗೆ 1000 ರೂ ಜಿ ಆರ ಜಿ ಕಾಲೇಜ ಇಂಡಿ ವಿದ್ಯಾರ್ಥಿಗಳಿಗೆ 500 ರೂ ಬಹುಮಾನ ವಿತರಿಸಿದರು.
ಟಿ ಹೆಚ್ಚ ಓ ಡಾ ಅರ್ಚನ ಕುಲಕರ್ಣಿ ತಮ್ಮ ಸ್ವಂತ ಹಣದಿಂದ ಪದಕ ಟ್ರೋಫಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಡಾ ಪ್ರಶಾಂತ ದೂಮಗೊಂಡ. ಡಾ ಅನಿಲ ಕುಮಾರ. ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗ ಸುನಂದ ಅಂಬಲಗಿ. ಡಿ ಕರಜಗಿ. ವೈ ಎಂ ಪೂಜಾರ. ಎಸ್ ಪಾಟೀಲ್. ಎಸ ಹೆಚ ಅತನೂರ. ಎಸ .ಪತ್ತಾರ ಮಂಜುಳಾ ಜೋಶಿ. ಜೋಸೆಫ್. ಹಿರೇಮಠ್ ಹಿರೇಮಠ್. ದಶವಂತ ಉಪಸ್ಥಿತರಿದ್ದರು.