ಗ್ರಾಮೀಣ ಪ್ರದೇಶದ ಜನರಿಗಾಗಿ ನುರಿತ ತಜ್ಞರಿಂದ ಉಚಿತ ಆರೋಗ್ಯ ತಪಾಸಣೆ
ಇಂಡಿ : ಗ್ರಾಮೀಣ ಪ್ರದೇಶದ ಜನರಿಗಾಗಿ ನುರಿತ ತಜ್ಞರಿಂದ ಉಚಿತ ಆರೋಗ್ಯ ತಪಾಸಣೆ ಹೊರ್ತಿ ಗ್ರಾಮದಲ್ಲಿ ಫೆ. 24 ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ ಆಯೋಜಕರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನ ಹೋರ್ತಿ ಗ್ರಾಮದಲ್ಲಿ ಬಿ.ಎಮ್ ಪಾಟೀಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಜಯಪುರ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ್ ಹಾಗೂ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಹೊರ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗುತ್ತದೆ.
ವಿಶೇಷವಾಗಿ ಇಂಡಿˌ ಚಡಚಣ, ಸಿಂದಗಿˌ ಆಲಮೇಲ, ಮುದ್ದೇಬಿಹಾಳ, ದೇವರಹಿಪ್ಪರಗಿ ಈ ತಾಲೂಕಿನ ಭಾಗದ ಜನರಲ್ಲಿ ಹೆಚ್ಚಾಗಿ ಕಿಡ್ನಿ ಸ್ಟೋನ್ ಸಮಸ್ಶೆ ಕಂಡುಬರುತ್ತಿವೆˌ ನಮ್ಮ ಆಹಾರ ಸೇವನೆ ಪದ್ದತಿಯಲ್ಲಿ ಬದಲಾವಣೆ ಹಿನ್ನೆಲೆ ಆರೋಗ್ಯ ಸಮಸ್ಯೆದಲ್ಲಿ ಏರುಪೇರು ಕಾಣುತ್ತಿವೆ. ಅದಲ್ಲದೇ ಗ್ರಾಮೀಣ ಪ್ರದೇಶ ಜನರು ಅತೀ ಹೆಚ್ಚು ಮಾಂಸಹಾರಿ ತಿನ್ನುವ ಜನರಲ್ಲಿ ಹೆಚ್ಚಾಗಿ ಆರೋಗ್ಯದಲ್ಲಿ ಇನ್ನೀತರ ಸಮಸ್ಯೆಗಳು ಕಾಣುತ್ತಿದ್ದೇವೆ. ಹಾಗಾಗಿ ಆರೋಗ್ಯದ ಹಿತದೃಷ್ಟಿಯಿಂದ ಅರಿತು ಗ್ರಾಮೀಣ ಭಾಗದ ಹೊರ್ತಿ ಸುತ್ತಮುತ್ತಲಿನ ಗ್ರಾಮಗಳ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಕಿಡ್ನಿ ಸ್ಟೋನ್ ಲಕ್ಷಣಗಳು
1)ಸೊಂಟ ನೋಸುವುದುˌ
2)ವಾಂತಿ ಬರುವುದು
3)ವಾಂತಿ ಬಂದಂತಾಗುವುದು
4)ಮೂತ್ರ ವಿಸರ್ಜನೆಯಲ್ಲಿ ಉರಿದಂತಾಗುವುದುˌ
5)ಮೂತ್ರ ವಿಸರ್ಜನೆ ಮಾಡುವಾಗು ತಟ್ಟಿಸಿದಂತಾಗುವುದುˌ
6)ಮೂತ್ರ ವಿಸರ್ಜನೆಯಲ್ಲಿ ಕೆಲವೊಮ್ಮೆ ರಕ್ತಸ್ರಾವ ಆಗುವುದು
7) ಎಡಕ್ಕೆ ಭಾಗದ ಮೂತ್ರಪಿಂಡ ˌಮೂತ್ರನಾಳದಲ್ಲಿ ಸ್ಟೋನ್ ಇದ್ದರೆ ಎಡಭಾಗದ ಬೆನ್ನು ನೋಹಿಸುವುದು ಮತ್ತು ಗೆಜ್ಜೆಯ ತನಕ ಜಗ್ಗಿದಂತಾಗುವುದು
8) ಬಲ ಭಾಗದ ಮೂತ್ರಪಿಂಡ ˌಮೂತ್ರನಾಳದಲ್ಲಿ ಸ್ಟೋನ್ ಇದ್ದರೆ ಬಲಭಾಗದ ಬೆನ್ನು ನೋಹಿಸುವುದು ಮತ್ತು ಗೆಜ್ಜೆಯ ತನಕ ಜಗ್ಗಿದಂತಾಗುವುದು
9) ಕೆಲವೊಮ್ಮೆ ಕಿಡ್ನಿ ಸ್ಟೋನ್ ತುಂಬಾ ದೊಡ್ಡದಾಗಿದ್ದರು ಈ ಲಕ್ಷಣಗಳು ಕೂಡಾ ಕಾಣಿಸದೇ ಇರುವುದು ಸಹ ಕಂಡು ಬಂದಿದೆˌ
ಪ್ರೋಸ್ಟೇಟ್ ಗ್ರಂಥಿ (ಬಿ ಪಿ ಎಚ್ ) ಲಕ್ಷಣಗಳು:
1)ಸಾಮನ್ಶವಾಗಿ ಪ್ರೋಸ್ಟೇಟ್ ಗ್ರಂಥಿ ಪುರುಷರಲ್ಲಿ ಮಾತ್ರ ಇರುತ್ತದೆ
2) ಪ್ರೋಸ್ಟೇಟ್ ಅಳತೆ 15—20ಗ್ರಾಂ ಇರುತ್ತದೆˌ
3) ಪುರುಷರ ವಯಸ್ಸು 50 ಮೇಲ್ಪಟ್ಟರೆ ಇದು ಮೂತ್ರ ವಿಸರ್ಜನೆಯಲ್ಲಿ ತೊಂದರೆ ಮಾಡುತ್ತದೆ.
4) ಮೇಲಿಂದ ಮೇಲೆ ಮೂತ್ರ ವಿಸರ್ಜನೆಗೆ ಹೋಗುವುದು
5) ಮೂತ್ರ ವಿಸರ್ಜನೆ ತಟ್ಟಿಸಿದಂತಾಗುವುದು
6) ಮೂತ್ರ ವಿಸರ್ಜನೆ ರಾತ್ರಿಯಲ್ಲೆ ಮೇಲಿಂದ ಮೇಲೆ ಬರುವುದು
7) ಮೂತ್ರ ವಿಸರ್ಜಿಸಿದರು ಮತ್ತೆ ಮೇಲಿಂದ ಮೇಲೆ ಮೂತ್ರ ಬರುವುದು
8)ಮೂತ್ರ ವಿಸರ್ಜಿಸಲು ಒತ್ತಡ ಹಾಕುವುದು
9)ಮೂತ್ರ ವಿಸರ್ಜನೆ ಚಿಕ್ಕದಾಗಿ ಬರುವುದು
10) ಮೂತ್ರ ವಿಸರ್ಜನೆ ತಡೆದುಕೊಳ್ಳಲಿಕ್ಕೆ ಆಗದೇ ಇರುವುದು
11) ಮೂತ್ರ ವಿಸರ್ಜನೆಯಲ್ಲಿ ಉರಿತ ಇರುವುದು
12) ಮೂತ್ರದಲ್ಲಿ ಕೆಲವೊಮ್ಮೆ ರಕ್ತಸ್ರಾವ ಆಗುವುದು
ಈ ರೀತಿಯಾಗಿ ಪುರುಷರಲ್ಲಿ ಪ್ರೋಸ್ಟೇಟ್ ಗ್ರಂಥಿಯ ಲಕ್ಷಣಗಳು ಕಂಡುಬರುತ್ತವೆˌ
ಈ ಮೇಲಿನ ಲಕ್ಷಣಗಳಿದ್ದವರು ಈ ಉಚಿತ ಆರೋಗ್ಶ ತಪಾಸಣೆ ಶಿಭಿರದ ಸದುಪಯೋಗ ಪಡೆದುಕೊಳ್ಳಲು ವಿನಂತಿಸುವೆವುˌ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಶ್ರೀ ಪ್ರೀತು ದಶವಂತ —9964288930 ಶ್ರೂಶ್ರುಷಕರು ಬಿ ಎಲ್ ಡಿ ಇ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಮೂತ್ರರೋಗ ಶಾಸ್ತ್ರ ವಿಭಾಗ ವಿಜಯಪುರ ˌ
ಸೂಚನೆ
1)ಶಿಭಿರದಲ್ಲಿ ಉಚಿತ ವೈಧ್ಶರ ಸಂದರ್ಶನ
2) ನಾಡಿ ಮಿಡಿತˌ ರಕ್ತದೊತ್ತಡˌ ದೇಹದ ತೂಕ ಪರೀಕ್ಷಿಸಲಾಗುವುದುˌ
3) ಉಚಿತ ಸಕ್ಕರೆ ಖಾಯಿಲೆ (GRBS) ತಪಾಸಣೆ ಮಾಡಲಾಗುವುದು
4) ಇಸಿಜಿ ಉಚಿತವಾಗಿ ಮಾಡಲಾಗುವುದು .
5)ಆಪರೇಷನ್ ಬೇಕಾದವರಿಗೆ ಉಚಿತವಾಗಿ ರೇಷನ್ ಕಾರ್ಡ್ ಆಧಾರ್ ಕಾರ್ಡ್ ನಲ್ಲಿ ಬಿ ಎಲ್ ಡಿ ಇ (ಡಿ ಯು)ಶ್ರೀ ಬಿ ಎಂ ಪಾಟೀಲ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಕೊಡಲಾಗುವುದುˌ