ಸಿರುಗುಪ್ಪ .ತಾಲೂಕಿನ ಉಪ್ಪಾರ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರ್ವತದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಡೆದ ನರೇಗಾ ಯೋಜನೆಯ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಸಸಿಗೆ ನೀರು ಹಾಕುವ ಮೂಲಕ ಶಾಸಕ ಎಂ. ಎಸ್ ಸೋಮಲಿಂಗಪ್ಪ ಉದ್ಘಾಟಿಸಿದರು.
ಆರೋಗ್ಯಾಧಿಕಾರಿ ಡಾ. ಈರಣ್ಣ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೊರೊನಾದಂತಹ ವಿಭಿನ್ನ ರೀತಿಯ ಕಾಯಿಲೆಗಳು ಜಗತ್ತನ್ನೇ ತಲ್ಲಣಗೊಳಿಸಿದ್ದು, ಆರೋಗ್ಯವಂತ ಪ್ರಜೆಗಳ ದೇಶದ ಶಕ್ತಿಯಾಗಿರುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿ.ಎನ್. ಸುಮಾ, ಉಪಾಧ್ಯಕ್ಷ ಕಾಡಸಿದ್ದಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ನರೇಗಾ ಯೋಜನೆ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಪಿಡಿಒ ನಾಗಮಣಿ, ವೈದ್ಯರಾದ ನಾಗರಾಜ್, ಮಲ್ಲಿಕಾರ್ಜುನ ರೆಡ್ಡಿ, ಚನ್ನವೀರ, ಜಾಫರ್, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಭೀಮರಾಜ್, ಆರೋಗ್ಯ ಮತ್ತು ಆಶಾ ಸಿಬ್ಬಂದಿ ಇದ್ದರು.