ಇಂಡಿ :ಮಹಾರಾಷ್ಟ್ರದ ಮುರಮದಿಂದ ಪ್ರಾರಂಭವಾಗಿ ವಿಜಯಪುರಕ್ಕೆ ತಲುಪುವ 548 ಬಿ ರಾಷ್ಟ್ರೀಯ ಹೆದ್ದಾರಿ ಸೆ- 9 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಧನಶೆಟ್ಟಿ ಮಂಗಲಕಾರ್ಯಾಲಯದಲ್ಲಿಸಂಸದ ರಮೇಶ್ ಜಿಗಜಿಣಿಗಿ ಅವರ ನೇತೃತ್ವದಲ್ಲಿ ಅಡಿಗಲ್ಲು ಸಮಾರಂಭ ನಡೆಯುತ್ತಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಹೇಳಿದರು.
ಶುಕ್ರವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯ – ದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ದಿನಗಳ ಬಹು ಬೇಡಿಕೆಯಾಗಿದ್ದ ಈ ರಾಜ್ಯ ರಸ್ತೆ, ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಅಡಿಗಲ್ಲು ಸಮಾರಂಭಕ್ಕೆ ಕಾರಣವಾಗಿದೆ. ಈ ರಾಷ್ಟ್ರೀಯ ಹೆದ್ದಾರಿ ಒಟ್ಟು 102.310 ಮೀ ಇದ್ದು, 984 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಹೊರವರ್ತುಲ ರಸ್ತೆ, 1 ಮೇಲುಸೇತುವೆ, 4 ಬೃಹತ್ ಸೇತುವೆಗಳು, 173 ಕಲ್ವರ್ಟಗಳನ್ನು ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದ್ದು 2 ವರ್ಷದಲ್ಲಿ ಕಾಲಾವಧಿ ಹೊಂದಿದೆ ಎಂದು ಹೇಳಿದರು. ಈ ಭಾಗದಲ್ಲಿ ಜನರು ಅತೀ ಹೆಚ್ಚಾಗಿ ಮಹಾರಾಷ್ಟ್ರದ ಜೊತೆ ವ್ಯಾಪಾರ, ವಹಿವಾಟು ಮತ್ತು ಕೃಷಿ ಉತ್ಪನ್ನಗಳನ್ನು ಆಮದು ಹಾಗೂ ರಪ್ತು ಮಾಡಲು ಅತ್ಯಂತ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಇನ್ನೂ ಬಿಜೆಪಿ ಜಿಲ್ಲಾ ಮುಖಂಡ ಕಾಸುಗೌಡ ಬಿರಾದಾರ ಮಾತಾನಾಡಿದ ಅವರು ಈ ರಾಜ್ಯ ರಸ್ತೆ, ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಭೂಮಿ ಪೂಜೆಗೆ ಕಾರಣವಾಗಲೂ ಸಂಸದ ರಮೇಶ್ ಜಿಗಜಿಣಿಗಿ ಅವರ ನಿರಂತರ ಪ್ರಯತ್ನ. ಕೇಂದ್ರ ಸಚಿವ ನಿತಿನ್ ಗಡ್ಕಿರಿ ಹಾಗೂ ನರೇಂದ್ರ ಮೋದಿ ಸರಕಾರದ ಫಲುವಾಗಿ ಈ ಸದ್ಯೆ ರಾಷ್ಟ್ರೀಯ ಹೆದ್ದಾರಿಯಾಗಿ ಅಡಿಗಲ್ಲು ಸಮಾರಂಭ ಕಾರಣವಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಸಿದ್ದಲಿಂಗ ಹಂಜಗಿ, ಶೀಲವಂತ ಉಮರಾಣಿ,ಬಿಜೆಪಿ ಜಿಲ್ಲಾ ಮುಖಂಡ ಅನೀಲ ಜಮಾದಾರ, ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯೆ ದೇವೆಂದ್ರ ಕುಂಬಾರ, ಮಂಜು ದೇವರ, ಸಂತೋಷ ಪಾಟೀಲ ಇನ್ನೂ ಅನೇಕರು ಉಪಸ್ಥಿತರಿದ್ದರು.