ಇಂಡಿ : ಆತ್ಮನಿರ್ಭರ ಕೃಷಿ ಮತ್ತು ಸಿರಿ ಧಾನ್ಯಗಳ ವರ್ಷ ಕಾರ್ಯಕ್ರಮ ಹಿನ್ನಲೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾ ವತಿಯಿಂದ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ನಡೆಯಿತು. ಇನ್ನ ಪಟ್ಟಣದಿಂದ ಮಹಾವೀರ ಧನಶೆಟ್ಟಿ ಮಂಗಳ ಕಾರ್ಯಾಲಯದ ವರೆಗೂ ಬಿಜೆಪಿ ಕಾರ್ಯಕರ್ತರು, ರೈತ ಮೋರ್ಚಾ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅಲ್ಲದೇ, ಮೆರವಣಿಗೆಯಲ್ಲಿ ಜೈ ಮೋದಿ, ಜೈ ಬಿಜೆಪಿ ಎಂದು ಘೋಷಣೆಗಳು ಕೂಗಿದರು.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ರಾಜ್ಯ ಸಭಾಸದಸ್ಯರು ಈರಣ್ಣ ಕಡಾಡಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಜಿಲ್ಲಾ ರೈತ ಮೂರ್ಚ ಅಧ್ಯಕ್ಷ ಕಾಸುಗೌಡ ಬಿರಾದಾರ, ಬಾಜಪ ಜಿಲ್ಲಾ ಅಧ್ಯಕ್ಷ ಆರ್ ಎಸ್ ಪಾಟೀಲ್ ಕುಚಬಾಳ, ದಯಸಾಗರ ಪಾಟೀಲ್, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೆದಲಗಿ, ಅನೀಲ ಜಮಾದಾರ, ಶೀಲವಂತ, ಉಮರಾಣಿ, ಹಣಮಂತರಾಯಗೌಡ ಪಾಟೀಲ್ ಇನ್ನೂ ಅನೇಕರು ಮುಖಂಡರು ,ರೈತರು ಹಾಗೂ ಕಾರ್ಯಕರ್ತರು ಉಪಸ್ಥಿತರು.