ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿಯ ನೂತನ ಅಧ್ಯಕ್ಷ “ಬಿ.ಎಸ್ ಕವಲಗಿ” ಗೆ ಮಾಜಿ ಶಾಸಕ ಶರಣಪ್ಪ ಸುಣಗಾರ ಸನ್ಮಾನ
ಇಂಡಿ : ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಸಂಘಟನಾ ಚತುರರು ಬಿ. ಎಸ್. ಕವಲಗಿ ಅವರಿಗೆ ಬೆಂಗಳೂರಿನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ತಳವಾರ ಸಮಾಜದ ರಾಜ್ಯದ ಹಿರಿಯ ಮುಖಂಡ ಹಾಗೂ ಸಿಂದಗಿ ವಿಧಾನಸಭಾದ ಮಾಜಿ ಶಾಸಕ ಶರಣಪ್ಪ ಅವರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದ ಅವರು, ವಿಜಯಪುರ ಲಿಂಬೆ ಬೆಳೆಗೆ ಮತ್ತಷ್ಟು ಮಾನ್ಯತೆ ಸಿಗಲಿ.ನಮ್ಮ ರೈತರು ಬದುಕು ಉತ್ಕೃಷ್ಟ ಮಟ್ಟದಲ್ಲಿ ಬದಲಾವಣೆ ಕಾಣಲು ಲಿಂಬೆ ಜಾಗತಿಕ ಮಟ್ಟದಲ್ಲಿ ಸ್ಥಾನ ಪಡೆಯಲಿ ಎಂದು ಹೇಳಿದರು.
ನಿಮ್ಮ ಜೊತೆಯಲ್ಲಿ ನಮ್ಮ ತಳವಾರ ಸಮಾಜ ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಪೋಲಿಸ್ ಅಧಿಕಾರಿ (CPI) ಅಂಬರಾಯಣ್ಣ ಕಮಾನಮನಿ ಹೈಕೋರ್ಟ್ ನ್ಯಾಯಾವಾದಿ ಆತ್ಮಾನಂದ ಜಂಬಗಿ ಹಾಗೂ AKNTJS ಸಂಘಟನೆಯ ರಾಜ್ಯ ಸಂಘಟನಾ ಅಧ್ಯಕ್ಷ ಸಿದ್ದು ರಮಗಾ ಸೇರಿದಂತೆ ಅನೇಕ ಉಪಸ್ಥಿತರಿದ್ದರು.