ರೈತರ ಏಳ್ಗೆಗೆ ನಮ್ಮ ಸಂಘ ಸದಾ ಕಾರ್ಯೋನ್ಮುಖವಾಗಿದೆ..
ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ
ಇಂಡಿ: ಸಹಕಾರ ಸಂಘಗಳು ಸರ್ವರ ಉಧ್ಧಾರದ ಸಂಜೀವಿನಿ ಯಂತೆ ಕಾರ್ಯ ನಿರ್ವಹಿಸಬೇಕು.
ಸಮಾಜದಲ್ಲಿನ ಬಡ ಜನರನ್ನು ಗುರುತಿಸಿ ಅವರಿಗೆ
ಉದ್ಯೋಗ ಕಲ್ಪಿಸಿಕೊಟ್ಟು ಸಾಲ ನೀಡಿ, ಅವರ ಉದ್ಧಾರದ ಜೊತೆಗೆ ಸಂಘದ ಏಳ್ಗೆಗೂ ಕಾರಣೀಯರಾಗ – ಬೇಕು ಎಂದು ಸಹಕಾರಿ ಅಧ್ಯಕ್ಷ ಬಿ.ಬಿ. ಗುಡ್ಡದ – ಹೇಳಿದರು.
ಅವರು ಇತ್ತೀಚೆಗೆ ಪಟ್ಟಣದ ಎಪಿಎಂಸಿ ಯಾರ್ಡ
ಆವರಣದಲ್ಲಿನ ಒಕ್ಕಲುತನ ಹುಟ್ಟುವಳಿ ಮಾರಾಟ
ಸಹಕಾರ ಸಂಘದ ಅಧ್ಯಕ್ಷತೆವಹಿಸಿ ಮಾತನಾಡಿದರು.
ನಮ್ಮ ಒಕ್ಕಲುತನ ಹುಟ್ಟುವಳಿ ಮಾರಟ ಸಂಘ
ತನ್ನ ಹೆಸರನಂತೆಯೇ ರೈತರ ಜೀವನಾಡಿಯಂತೆ
ಕಾರ್ಯ ನಿರ್ವಹಿಸುತ್ತಿದೆ. ರೈತರಿಗೆ ಕಡಿಮೆ ದರದಲ್ಲಿ
ಬೀಜ ಗೊಬ್ಬರ ನೀಡಲಾಗುತ್ತಿದೆ ಎಂದರು.
ಸಂಘದ ವ್ಯವಸ್ಥಾಪಕ ರಾಮಚಂದ್ರ ಕಾವಿ
ಮಾತನಾಡಿ, ರೈತರ ಏಳ್ಗೆಗೆ ನಮ್ಮ ಸಂಘ ಸದಾ
ಕಾರ್ಯೋನ್ಮುಖವಾಗಿದೆ. ರೈತರಿಗೆ ರಸಗೊಬ್ಬರ,
ಕ್ರಮಿನಾಶಕ ಸೇರಿದಂತೆ ರೇಷನ್ ನೀಡಲಾಗುತ್ತಿದೆ.
ಸಂಘದ ವತಿಯಿಂದ ಮಳಿಗೆಗಳನ್ನು ಕಟ್ಟಿದ್ದು,
ರೈತರ ಮಕ್ಕಳಿಗೆ ಮಳೀಗೆ ಬಾಡಿಗೆ ನೀಡಿ ವ್ಯಾಪಾರ
ವಹಿವಾಟು ನಡೆಸಲು ಅನುಕೂಲ ಕಲ್ಪಿಸಿದೆ ಎಂದು
ವಿವರಿಸಿದರು.
ಸಂಘದ ಉಪಾಧ್ಯಕ್ಷ ಅಣ್ಣಾಸಾಹೇಬ ಪಾಟೀಲ,
ನಿರ್ದೇಶಕರಾದ ಗುರುನಾಥ ಮೇತ್ರಿ, ರಾಜೇಂದ್ರ
ಪಾಟೀಲ, ಬಸವರಾಜ ಲವಗಿ, ಮಲ್ಲಪ್ಪ ಭೋಸಗಿ,
ಮಲ್ಲಪ್ಪ ಗುಡ್ಲ, ಲಕ್ಷ್ಮಣ ಲಮಾಣಿ ವೇದಿಕೆಯಲ್ಲಿದ್ದರು.