ಇಂಡಿಯಲ್ಲಿ ಮಾಜಿ ಸಿಎಮ್ ಯಡಿಯೂರಪ್ಪ ಹಾಗೂ ವಿಜೆಯೇಂದ್ರ ವಿರುದ್ಧ ದಿಕ್ಕಾರ
ಇಂಡಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಿದನ್ನು ವಿರೋಧಿಸಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಹಲಗೆ ಬಾರಿಸುತ್ತ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಯಡಿಯೂರಪ್ಪನವರ ವಿರುಧ್ಧ ಧಿಕ್ಕಾರ ಕೂಗುತ್ತ, ಯತ್ನಾಳ ಅವರಿಗೆ ಜಯವಾಗಲಿ ಎಂಬ ಜಯಘೋಷ ಹಾಕುತ್ತ ಸಾಗಿದರು.
ಬಸನಗೌಡ ಪಾಟೀಲ (ನಾಗರಾಳ ಹುಲಿ) ಮಾತನಾಡಿ, ಯಡಿಯೂರಪ್ಪ ವಿಜಯೇಂದ್ರ ಅವರ ಕುತಂತ್ರ ಕುಮ್ಮಕ್ಕಿನಿಂದ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿರುವದು ಹಿಂದೂ ಸಮುದಾಯಕ್ಕೆ ಮಾಡಿದುವ ಅಪಮಾನ. ಈ ತಪ್ಪು ನಿರ್ಧಾರದಿಂದ ಬಿಜೆಪಿ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ. ಕೂಡಲೇ ಅವರನ್ನು ಪಕ್ಷಕ್ಕೆ ಮರಳಿ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಎಂ.ಎಸ್.ರುದ್ರಗೌಡ ಮಾತನಾಡಿ, ಹೈಕಮಾಂಡ ತನ್ನ ನಿರ್ಧಾರವನ್ನು ಬದಲಿಸಿ ಮತ್ತೆ ಯತ್ನಾಳ ಅವರನ್ನು ಪಕ್ಷಕ್ಕೆ ಗೌರವಯುತವಾಗಿ ಸ್ವಾಗತಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಬಿಜೆಪಿ ಕೇವಲ ಅಪ್ಪ ಮಕ್ಕಳ ಪಕ್ಷವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಹೊಂದಾಣ ಕೆ ಮಾಡಿಕೊಂಡು ರಾಜಕೀಯ ಮಾಡುತ್ತಾರೆ. ಆದರೆ ಬಸವನಗೌಡರಿಗೆ ಅದು ಸರಿಹೋಗುವುದಿಲ್ಲ. ಪಕ್ಷದ ರಾಷ್ಟಿçÃಯ ಮುಖಂಡರು ಅವರ ಉಛ್ಛಾಟನೆಯನ್ನು ರದ್ದುಗೊಳಿಸಿ ಬಸನಗೌಡರಿಗೆ ಮರಳಿ ಪಕ್ಷಕ್ಕೆ ಕರೆತರಬೇಕೆಂದು ಆಗ್ರಹಿಸಿದರು.
ದಯಾಸಾಗರ ಪಾಟೀಲ ಮಾತನಾಡಿ, ಹಿಂದೂಪರವಾಗಿ ಗಟ್ಟಿಯಾಗಿ ನಿಲ್ಲುವ ಯತ್ನಾಳ ಸಾಹೇಬರನ್ನು ಬಿಜೆಪಿ ಪಕ್ಷ ಉಚ್ಛಾಟಿಸಿದ್ದು ಸರಿಯಲ್ಲ. ಹಿಂದೂನಾಯಕರಾದ ಬಸವನಗೌಡ ಪಾಟೀಲ ಯತ್ನಾಳ ಅವರನ್ನು ಅಪ್ಪ-ಮಕ್ಕಳು ಕೂಡಿಕೊಂಡು ಅವರನ್ನು ಉಚ್ಚಾಟನೆ ಮಾಡಿರಬಹುದು ಆದರೆ ರಾಜ್ಯದ ಜನ ಕೈಬಿಡುವುದಿಲ್ಲ. ಯತ್ನಾಳ ಗೌಡರು ಹಿಂದುತ್ವಕ್ಕಾಗಿ ಹೋರಾಟ ಮಾಡುತ್ತಾರೆ. ನೇರವಾಗಿ ಇದ್ದದ್ದನ್ನು ಇದ್ದಂಗೆ ಹೇಳುವ ವ್ಯಕ್ತಿಯಾಗಿದ್ದಾರೆ. ಅವರನ್ನು ಉಚ್ಚಾಟಿಸಿದ್ದು ಸರಿಯಲ್ಲ. ಇದರಿಂದ ಪಕ್ಷಕ್ಕೆ ಭಾರೀ ಹಿನ್ನಡೆಯಾಗುವುದರಲ್ಲಿ ಸಂದೇಹವಿಲ್ಲ. ಮಾಡಿದ ತಪ್ಪನ್ನು ಹೈಕಮಾಂಡ್ ಒಪ್ಪಿಕೊಂಡು ಯತ್ನಾಳರನ್ನು ಕೂಡಲೆ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳಬೇಕೆಂದರು.
ಇಂಡಿ ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಎಚ್.ಬಿರಾದಾರ ಮಾತನಾಡಿದರು. ಬಸನಗೌಡ ಪಾಟೀಲ ಯತ್ನಾಳ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ, ವಿಜಯೇಂದ್ರ ಹಾಗೂ ಯಡಿಯೂರಪ್ಪನವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಶ್ರೀಶೈಲ ಮುಳಜಿ, ಶರಣಗೌಡ ಬಂಡಿ, ಗಿರಿಮಲ್ಲಗೌಡ ಬಿರಾದಾರ, ರಮೇಶ ಬಿರಾದಾರ, ಅಣ್ಣಪ್ಪ ಬಡಿಗೇರ, ಸೋಮಶೇಖರ ದೇವರ, ಸೋಮನಾಥ ಪ್ರಚಂಡಿ, ಶ್ರೀಶೈಲ ಕಲ್ಲೂರ, ವಿಠ್ಠಲ ಬಾಬಳಗಾಂವ, ಅಶೋಕಗೌಡ ಪಾಟೀಲ, ಪಂಚಪ್ಪ ಪಾಟೀಲ, ವಿನೋದ ಹದಗಲ್ಲ, ಆನಂದ ದೇವರ, ಶಾಂತೇಶ ಕ್ಷತ್ರಿ, ರತನ ಹಲವಾಯಿ ಅಕ್ಷಯ ಪಾಟೀಲ ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ದರು.
ಇಂಡಿ: ಶಾಸಕ ಬಸನಗೌಡ ಪಾಟೀಲರ ಉಚ್ಚಾಟನೆ ಖಂಡಿಸಿ ಅಭಿಮಾನಿಗಳು ಬೃಹತ ಪ್ರತಿಭಟನೆ ನಡೆಸಿದರು.
ಇಂಡಿ: ಶಾಸಕ ಬಸನಗೌಡ ಪಾಟೀಲರ ಉಚ್ಚಾಟನೆ ಖಂಡಿಸಿ ಅಭಿಮಾನಿಗಳು ವಿಜಯೇಂದ್ರ ಹಾಗೂ ಯಡಿಯೂರಪ್ಪನವರ ಪ್ರತಿಕೃತಿ ದಹಿಸಿದರು.