ಅಕ್ರಮವಾಗಿ ಶ್ರೀಗಂಧ ಕಟಾವು ಓರ್ವನ ಬಂಧನ..!
ಹನೂರು : ಅಕ್ರಮವಾಗಿ ಶ್ರೀಗಂಧ ಮರವನ್ನು ಕಟಾವು ಮಾಡಿದ ಓರ್ವ ಅರಣ್ಯ ಇಲಾಖೆಯ ಪೋಲಿಸ್ ಬಲೆಗೆ ಬಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ನಡೆದಿದೆ.
ತಾಲ್ಲೂಕಿನ ರಾಮಪೂರ ಹೋಬಳಿಯ ಸೂಳೇರಿಪಾಳ್ಯ ಗ್ರಾಮದಲ್ಲಿ ಅನುಮತಿ ಇಲ್ಲದೆ ಶ್ರೀಗಂಧ ಮರವನ್ನು ಕಟಾವು ಮಾಡುತ್ತಿದ್ದ ಚಂದು ಹಾಗೂ ಕಾಂಚಳ್ಳಿ ಗ್ರಾಮದ ಮಹೇಶ. ಈ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿಗಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಚಂದುನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮಹೇಶ ಎಂಬಾತ್ ತಲೆ ಮರೆಸಿಕೊಂಡಿದ್ದಾನೆ.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಪಿ. ಪ್ರವೀಣ, ಉಪವಲಯ ಅರಣ್ಯಾಧಿಕಾರಿ ಆರ್ ಸಾಲನ್, ಪ್ರಸಾದ ಕೆ, ಗಸ್ತು ಅರಣ್ಯ ಪಾಲಕ ಅನೀಲಕುಮಾರ, ಗಣೇಶ್ ಕೆ ಎನ್, ಪ್ರಭು ಹಾಗೂ ವಾಹನ ಚಾಲಕ ಪಾಲ್ಗೊಂಡಿದ್ದರು.
ವರದಿ : ಚೇತನ್ ಕುಮಾರ್ ಎಲ್, ತಾಲ್ಲೂಕು ಹನೂರು, ಚಾಮರಾಜನಗರ ಜಿಲ್ಲೆ