ಪುಂಡಾನೆ ಸೆರೆ; ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ..!
ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಗೆ ಒಳಪಡುವ ಪೊನ್ನಾಚಿ ಗ್ರಾಮದ ಸುತ್ತಮುತ್ತ ಆನೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಆರಂಭಿಸಿದೆ. ಪೊನ್ನಾಚಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಉಪಟಳ ಕೊಡುತ್ತಿದ್ದ ಪುಂಡಾನೆ ಸೆರೆಗೆ ಅರಣ್ಯ ಇಲಾಖೆಯ ಆರು ಆನೆಗಳು ಕಾರ್ಯಾಚರಣೆಗೆ ಬಂದಿಳಿದಿವೆ. ಕಳೆದ ಮೂರು ನಾಲ್ಕು ತಿಂಗಳಿಗಳಿಂದ ಪುಂಡಾನೆ ಒಂದು ಕಾಡಂಚಿನ ಜನರಿಗೆ ವ್ಯಾಪಕ ತೊಂದರೆ ಕೊಡುತ್ತಿತ್ತು.
ರೈತರ ಬೆಳೆದಿದ್ದ ಬೆಳೆಯನ್ನು ನಾಶ ಮಾಡೋದರ ಜೊತೆಗೆ ಮನೆಗಳ ಬಳಿ ಬಂದು ಗೇಟು, ಗೋಡೆ ಹಾಗೂ ಬೈಕ್ ಗಳ ಮೇಲೆ ದಾಳಿ ಮಾಡಿತ್ತು.
ಇದರಿಂದ ಭಯಭೀತರಾಗಿದ್ದಂತಹ ಸಾರ್ವಜನಿಕರು ಆನೆ ಸೆರೆ ಹಿಡಿಯುವಂತೆ ವ್ಯಾಪಕ ಒತ್ತಾಯ ಕೇಳಿ ಬಂದಿತ್ತು. ಇದನ್ನು ಮನಗೊಂಡಂತಹ ಅರಣ್ಯ ಇಲಾಖೆಯು ಪುಂಡಾನೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ.
ಇಂದಿನಿಂದ ಕಾರ್ಯಾಚರಣೆ ಆರಂಭವಾಗಿದ್ದು ಈ ಕಾರ್ಯಾಚರಣೆಯ ವೇಳೆಯಲ್ಲಿ ನಾಗರಹೊಳೆ ಅಭಯಾರಣ್ಯ ಹಾಗೂ ಕುಶಾಲ್ ನಗರ ದುಬಾರೆ ಶಿಬಿರದಿಂದ ಬಲರಾಮ, ಅರ್ಜುನ, ಅಶ್ವತ್ಥಾಮ, ಕರ್ಣ ಮುಂತಾದ ಆನೆಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದೆ.
ವರದಿ: ಚೇತನಕುಮಾರ ಎಲ್, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ.