ಲಿಂಗಸೂಗೂರು: ಗುಡ್ಡದಲ್ಲಿ ಕತ್ತೆಕಿರುಬ ಪ್ರಾಣಿಯನ್ನು ಕೊಡಲಿ ಹಾಗೂ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಅದರ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಮರ‍್ನಾಲ್ಕು ದಿನಗಳ ಹಿಂದೆ ಮುದಗಲ್ ಪಟ್ಟಣದ ಹೊರ ಬಾಗದ ಗುಡ್ಡದ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕತ್ತೆಕಿರುಬ (ಐಯನ್) ಕಾಡು ಪ್ರಾಣಿಯನ್ನು ಮರ‍್ನಾಲ್ಕು ಕುರಿಗಾಯಿಗಳು ಕೊಡಲಿ ಮತ್ತು ಕಲ್ಲು, ಬಡಿಗೆ ಇಂದ ಹೊಡೆದು ಸಾಯಿಸಿದ್ದರು.

ಇದರ ದೃಶ್ಯಗಳನ್ನು ಮೋಬೈಲ್ ದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಇದನ್ನು ಗಮನಿಸಿದ ಅನೇಕರು ಪ್ರಾಣಿಗೆ ಹಿಂಸೆ ನೀಡಿ ಸಾಹಿಸುತ್ತಿರುವ ಬಗ್ಗೆ ಟೀಕೆ ವ್ಯಕ್ತಪಡೆಸಿದ್ದರು. ಇದನ್ನು ಗಮನಿಸಿದ ಲಿಂಗಸುಗೂರು ವಲಯ ಅರಣ್ಯಾಧಿಕಾರಿ ಚನ್ನಬಸವರಾಜ ಕಟ್ಟಿಮನಿ ಹಾಗೂ ಮುದಗಲ್ ಉಪವಲಯ ಅರಣ್ಯಾಧಿಕಾರಿ ಹುಸೇನ ಬಾಷಾ ನೇತೃತ್ವದಲ್ಲಿ ತನಿಖೆ ನಡೆಸಿ ಪ್ರಾಣಿಯನ್ನು ಕೊಂದ ಮೇಗಳಪೇಟೆಯ ಗ್ಯಾನಪ್ಪ ತಂದಿ ಆದಪ್ಪ ಎನ್ನುವಾತನನ್ನು ಬಂದಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.



















