- ಅರಣ್ಯ ಇಲಾಖೆಯಿಂದ 12 ಸಾವಿರ ಸಸಿ ವಿತರಣೆ
ಇಂಡಿ : ತಾಲೂಕಿನ ಜೇವೂರ ಸಸ್ಯಕ್ಷೇತ್ರದಿಂದ
ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ 12 ಸಾವಿರ
ಸಸಿಗಳನ್ನು ವಿತರಿಸಲಾಗುವದೆಂದು ವಲಯ ಅರಣ್ಯ
ಆಧಿಕಾರಿ ಅನಂತಕುಮಾರ ತಿಳಿಸಿದ್ದಾರೆ. ಪಟ್ಟಣದ ಪ್ರಾದೇಶಿಕ ಅರಣ್ಯ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು ಜೂ.3 ರಿಂದ ರೈತರಿಗೆ, ಸಂಘಸಂಸ್ಥೆಗಳಿಗೆ, ಶಾಲಾ ಕಾಲೇಜುಗಳಿಗೆ ಮತ್ತು ಸರಕಾರಿ ಕಚೇರಿಗಳಿಗೆ ಸಸಿಗಳನ್ನು
ವಿತರಿಸಲಾಗುವದು. ಸಸಿಗಳು 6*9 ಮತ್ತು 8* 12 ಬ್ಯಾಗ್ ಸೈಜ್ ನಲ್ಲಿ ವಿತರಿಸಲಾಗುವದು. 6*9 ಬ್ಯಾಗ ಸೈಜ್ ಗೆ ದರ ರೂ 3 ರೂ ಮತ್ತು 8*12 ಬ್ಯಾಗ ಸೈಜ್ ಗೆ ದರ ರೂ 6 ರೂ ನಿಗದಿಪಡಿಸಲಾಗಿದೆ ಎಂದರು.
ನುಗ್ಗೆ, ಸಾಗವಾನಿ, ಮಹಾಗನಿ, ತಪಸಿ, ಹುಣಸೆ, ಸಸಿಗಳು 6*9 ಬ್ಯಾಗ ಸೈಜಿನಲ್ಲಿ ಮತ್ತು ಮಹಾಗನಿ, ಸಾಗವಾನಿ,
ಹುಣಸೆ, ಬದಾಮ, ಮೆಹಂದಿ, ಶ್ರೀಗಂಧ, ರಕ್ತ ಚಂದನ, ಬಾರೆ, ಪೆರು, ನಿಂಬೆ, ನುಗ್ಗೆ 8*12 ಬ್ಯಾಗ ಸೈಜ್ ನಲ್ಲಿ ದೊರೆಯುತ್ತವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಡಚಣ ಶಾಖೆಯ ಉಪ
ವಲಯ ಅರಣ್ಯಾಧಿಕಾರಿ ರಶೀದ ಮಾಶ್ಯಾಳ,ವನ
ಪಾಲಕ ಹಣಮಂತ ಲೋಣಿ, ಇಂಡಿ ಉಪ ವಲಯ
ಅರಣ್ಯಾಧಿಕಾರಿ ಸುನೀಲ ಪವಾರ ಮತ್ತಿತರಿದ್ದರು.