ಕೂಡ್ಲಗಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಕೆಲ ಶಿಕ್ಷಕರು ಅವ್ಯವಹಾರ ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧ ಸೂಕ್ತ ತನಿಖೆ ಮಾಡಿ ಕಾನೂನು ರೀತಿಯ ಶಿಸ್ತು ಕ್ರಮ ಕೈಗೊಳ್ಳುಬೇಕೆಂದು ಕರವೇ ಆಗ್ರಹಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಅಧ್ಯಕ್ಷ ಕಾಟೇರ ಹಾಲೇಶ ನೇತೃತ್ವದಲ್ಲಿ. ಕ್ಷೇತ್ರ ಶಿಕ್ಷಣಾಧಿಕಾರಿ ಯುವ ರಾಜನಾಯಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಅಧ್ಯಕ್ಷ ಎಂ. ಓಬಳೇಶ, ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಉಪಾಧ್ಯಕ್ಷ ಮಹಮದ್ ತೋಪಿಕ್, ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಪ್ರಧಾನ ಕಾರ್ಯದರ್ಶಿ ಆರ್.ಎಂ.ಕಾಶಿನಾಥ್, ನರಸಿಂಹ ಬಣಕರ್, ವೀರಭದ್ರಪ್ಪ ಮರಬ, ಅಜ್ಜನ ಗೌಡ, ಉಕ್ಕಡದ ರಮೇಶ್, ಮಹೇಶ್ ಹೆಗ್ಡೆಳ್, ನಾಗಪ್ಪ, ಚಂದ್ರಪ್ಪ, ಚಿಕ್ಕಪ್ಪ, ಕಾಟೆರ್ ಲಂಕೇಶ್, ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಕಟೇರ್ ನಾಗರಾಜ್ ಉಪಸ್ಥಿತರಿದ್ದರು.