ರೈತ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಎಸ್ ಬಿ ಕೆಂಬೋಗಿ ಆಯ್ಕೆ..
ಇಂಡಿ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿ ಎಸ್ ಬಿ ಕೆಂಬೋಗಿ ಅವರನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಆದೇಶ ಪತ್ರ ನೀಡಿದ್ದಾರೆ.
ಗುರುವಾರ, ಬೆಂಗಳೂರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಛೇರಿಯಲ್ಲಿ ವಿಜಯಪುರ ಜಿಲ್ಲಾ ನೂತನ ಅಧ್ಯಕ್ಷರನ್ನಾಗಿ ಎಸ್ ಬಿ ಕೆಂಬೋಗಿ ಅವರನ್ನು ಆಯ್ಕೆ ಮಾಡಿದರು. ಆ ನಂತರ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಮಾತನಾಡಿದ ಅವರು, ಜಿಲ್ಲೆಯ ರೈತರ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ಅವರ ಸಮಸ್ಯೆಗಳಿಗೆ ಧ್ವನಿಯಾಗಬೇಕು ನಿಲ್ಲಬೇಕು. ರಾಜ್ಯ ರೈತ ಸಂಘವು ಕೆಲವು ಸೈದ್ದಾಂತಿಕ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದು, ಈ ವಿಚಾರಗಳಿಗೆ ಮತ್ತು ಸಂವಿಧಾನ ಬದ್ದ ನೀತಿ ನಿಯಮಗಳನ್ನು ಗಾಳಿಗೆ ತೋರದೆ ಶಿಸ್ತಿನಿಂದ ಕೆಲಸ ಮಾಡುವ ಅವಶ್ಯಕತೆ ಇದೆ. ಯಾವುದೇ ಮತ ಜಾತಿಗಳಿಗೆ ಮತ್ತು ಯಾವುದೇ ರಾಜಕೀಯ ಪಕ್ಷಗಳ ಸೋಂಕಿಲ್ಲದೇ ಪ್ರಾಮಾಣಿಕವಾಗಿ ಸಂಘ ನೀಡಿರುವ ಜವಾಬ್ದಾರಿ ಹುದ್ದೆಯನ್ನು ನಿಷ್ಠೆಯಿಂದ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಲಿಂಗಸೂಗುರ ತಾಲ್ಲೂಕು ರೈತ ಸಂಘದ ಶಿವಪುತ್ರಗೌಡ, ಬಿಇ ಸಿವಿಲ್ ಇಂಜಿನಿಯರ್ ಸುರೇಶ್ ಡೊಂಗ್ರೊಜ್, ಪತ್ರಕರ್ತ ಶಂಕರ್ ಜಮಾದಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.