ಕಳಪೆ ಚಹಾ ಪುಡಿ..! ಚಹಾ ಸೇವನೆಯಿಂದ ಕ್ಯಾನ್ಸರ್ ರೋಗ..!
ಹೊಟೇಲ್‌ಗಳಲ್ಲಿನ ಆಹಾರ ಗುಣಮಟ್ಟ ಪರಿಶೀಲನೆ..!
ಖಡಕ್ ಎಚ್ಚರಿಕೆ ಆಹಾರದ ಗುಣಮಟ್ಟ ಕಾಯ್ದುಕೊಳ್ಳಿ..! ಇಲ್ಲವಾದರೆ ಕಾನೂನು ಕ್ರಮ..!
ಹಲವಾರು ಹೊಟೆಲ್ ಹಾಗೂ ಅಂಗಡಿಗಳಲ್ಲಿ ಕಳಪೆ ವಸ್ತುಗಳು ಖಡಕ್ ಎಚ್ಚರಿಕೆ..!
ಚಹಾ ಪುಡಿ, ಕಾಳು ಮೆಣಸಿನ ಆಘಾತಕಾರಿ ಮಾಹಿತಿ..!
ಇಂಡಿ : ಆಹಾರದ ಗುಣಮಟ್ಟ ಕಾಯ್ದುಕೊಳ್ಳಿ. ಇಲವಾದರೆ ಕಠಿಣವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೊಟೇಲ್, ಬೇಕರಿ ಹಾಗೂ ಅಂಗಡಕಾರರಿಗೆ ಆಹಾರ ಸುರಕ್ಷತಾ ಹಾಗೂ ಗುಣಮಟ್ಟದ ಪರಿಶೀಲನಾ ತಂಡ ಬುಧುವಾರ ಪಟ್ಟಣದಲ್ಲಿ ಖಡಕ್ ಎಚ್ಚರಿಕೆ ನೀಡಿದೆ.
ಪಟ್ಟಣದ ಪ್ರಮುಖ ರಸ್ತೆಯಲ್ಲಿರುವ ವಿವಿಧ ಹೊಟೇಲ್, ಬೇಕರಿ, ಸುಪರ್ ಮಾರ್ಕೆಟ್‌ಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಘಟಕದ ತಂಡ ಸ್ಥಳೀಯ ಅಧಿಕಾರಿಗಳೊಂದಿಗೆ ತಯಾರಾಗುವ ಉಪಾಹಾರ ಮತ್ತು ಮಾರಾಟವಾಗುವ ಆಹಾರ ಸಾಮಗ್ರಿಗಳನ್ನು ಬಗ್ಗೆ ಪರಿಶೀಲನೆ ನಡೆಸಿದರು.
ಇನ್ನೂ ಈ ಸಂದರ್ಭದಲ್ಲಿ ಸಂಚಾರಿ ಪ್ರಯೋಗಾಲಯ ವಾಹನ ಸಮೇತ ಬಂದಿದ್ದ ತಂಡವು ಅಂಗಡಿಯಲ್ಲಿ ಸಂಗ್ರಹಿಸಿದ್ದ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ವಾಹನದಲ್ಲಿಯೇ ಪರಿಶೀಲಿಸಿ ಗುಣಮಟ್ಟ ಖಚಿತ ಪಡಿಸಿಕೊಂಡರು. ಕಲಬೆರಕೆ ಮತ್ತು ಗುಣಮಟ್ಟದಲ್ಲಿ ಕೊರತೆ ಕಂಡು ಬಂದಿದ್ದರಿಂದ ಅಂಗಡಿಕಾರರಿಗೆ ತುರ್ತು ಸರಿಪಡಿಸಿಕೊಳ್ಳಲು ಸಲಹೆ ನೀಡಿ, ಕಲಬೆರಕೆ ವಸ್ತುಗಳು ಬಗ್ಗೆ ಜಾಗೃತಿ ಮೂಡಿಸಿದರು.
ಹಲವಾರು ಅಂಗಡಿ ಹಾಗೂ ಹೋಟೆಲಗಳಿಗೆ ಬೇಟಿಕೊಟ್ಟು ಸಾರ್ವಜನಿಕರಿಗೆ ಪ್ರಾತೇಕ್ಷಿಕೆ ಮೂಲಕ ಜಾಗೃತಿ ಮೂಡಿಸಿ ಮಾತಾನಾಡಿದ, ತಾಲೂಕು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣದ ಅಧಿಕಾರಿ ಮೋತಲಾಲ ಚವ್ಹಾಣ ಅವರು, ಕಳಪೆ ಆಹಾರ ಸೇವೆನೆಯಂದ ಅನೇಕ ರೋಗದಿಂದ ಬಳಲುವ ಕೆಟ್ಟ ಪರಿಸ್ಥಿತಿ ನಮ್ಮಲ್ಲಿ ಎದುರಾಗುತ್ತಿದೆ. ಅದರಲ್ಲೂ ಕಳಪೆ ಚಹಾ ಪತ್ತೆಯಿಂದ ಕ್ಯಾನ್ಸರ್ ರೋಗ ಹೆಚ್ಚಾಗುತ್ತಿದೆ. ಇಂದು ಗ್ರಾಮೀಣ ಭಾಗದಲ್ಲಿಯೂ ಸಹ ಚಹಾ ಸೇವೆನೆಯಿಂದ ಕ್ಯಾನ್ಸರ್ ರೋಗ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನಿಂದ ಸಕಲ ಸೌಲಭ್ಯ ಇರುವ ವಾಹನ ಎಲ್ಲೆಡೆ ಸಂಚರಿಸುತ್ತಿದೆ. ಇದೀಗ ಜಿಲ್ಲೆಯಿಂದ ವಿವಿಧ ತಾಲೂಕಿಗೆ ತೆರಳಿ ಗುಣಮಟ್ಟ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಅದಲ್ಲದೇ ಆಹಾರದ ಗುಣಮಟ್ಟ ವಾಹನದಲ್ಲಿ ಸ್ಥಳದಲ್ಲೇ ಖಾತರಿಪಡಿಸಿಕೊಳ್ಳುವ ತಂತ್ರಜ್ಞಾನ ಹೊಂದಿದೆ.
ಆದರೆ ಮೊದಲು ಆಹಾರವನ್ನು ಸಂಗ್ರಹಿಸಿ ಗುಣಮಟ್ಟ ಪರಿಶೀಲನೆ ಗಾಗಿ ಪ್ರಯೋಗಾಲಯಕ್ಕೆ ಕಳಿಸಿ ವರದಿ ತರಿಸಿಕೊಳ್ಳುವುದು ಇತ್ತು. ಅದು ಮಾರ್ಕೆಟ್‌ಗಳಲ್ಲಿನ ವಿಳಂಬ ಪ್ರಕ್ರಿಯೆ ಆಗುತ್ತಿತ್ತು. ಆಹಾರ ಸಾಮಗ್ರಿ ಮಾದರಿಗಳನ್ನು ಇದನ್ನು ಮನಗಂಡು ಜಾಗೃತಿ ತಪಾಸಣೆ ಮೂಡಿಸುವ ವಾಹನದಲ್ಲೇ ಆ ನಡೆಸಲಾಗುತ್ತದೆ. ಮೊದಲೆಲ್ಲ ತಂತ್ರಜ್ಞಾನ ಅಳವಡಿಸಿ ಸ್ಥಳದಲ್ಲೇ ದೂರು ಕೇಳಿಬರುವ ಯಾವುದೇ ತೀರ್ಮಾನಿಸುವ ನೂತನ ವ್ಯವಸ್ಥೆ ಹೊಟೇಲ್, ಬೇಕರಿಯಿಂದ ಜಾರಿಗೆ ಬಂದಿರುವುದನ್ನು ಸ್ಯಾಂಪಲ್ ಸಂಗ್ರಹಿಸಿದ ಮೇಲೆ ಎಲ್ಲರಿಗೂ ಮನವರಿಕೆ ಮಾಡಲಾಗುತಿತ್ತು.
ಆದರೆ ಈಗ ಅತೀ ಹೆಚ್ಚು ಜನಸಂದಣಿ ಹೊಟೇಲುಗಳನ್ನು ಗುರಿಯಾಗಿಸಿಕೊಂಡು ಪರಿಶೀಲನೆ ನಡೆಸಲಾಗುತ್ತದೆ. ಲೋಪ ದೋಷ ಕಂಡು ಬಂದ ಹೊಟೇಲ್‌ನವರಿಗೆ ತಿದ್ದಿಕೊಳ್ಳಲು ಅವಕಾಶ ಕೊಡಲಾಗುತ್ತದೆ. ಪದೇ ಪದೇ ತಪ್ಪು ಕಂಡು ಬಂದಲ್ಲಿ ಅಂಥ ಹೊಟೇಲ್ ಮಾಲಿಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಕ್ರಮ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ಆಹಾರ ವಿಶ್ಲೇಷಕ ಅಧಿಕಾರಿ ಮಲ್ಲಿಕಾರ್ಜುನ ಹಾಗೂ ಸಿಂದಗಿ ತಾಲೂಕು ಆಹಾರ ಪರಿಶೀಲನೆ ಅಧಿಕಾರಿ ಸೋಮು ಮಕಣಾಪುರ ಉಪಸ್ಥಿತರಿದ್ದು, ಇನ್ನೂ ಅನೇಕ ಸ್ಥಳೀಯ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.