ಪ್ಲೈವುಡ್ ತುಂಬಿದ್ದ ಲಾರಿ ಸುಟ್ಟು ಭಸ್ಮ..!
ವಿಜಯಪುರ: ಲಾರಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಫ್ಲೈವುಡ್ ತುಂಬಿದ್ದ ಲಾರಿ ಸುಟ್ಟು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಉಣ್ಣಿಬಾವಿ ಬಳಿ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ನಡೆದಿದೆ. ರಸ್ತೆ ಬದಿ ಲಾರಿ ನಿಲ್ಲಿಸಿ ಚಾಲಕ ಅಡುಗೆ ಮಾಡುವಾಗ ಸ್ಟೋವ್ ಸ್ಪೋಟಗೊಂಡು ಪಕ್ಕದಲ್ಲೇ ನಿಂತಿದ್ದ ಲಾರಿಗೆ ಬೆಂಕಿಗೆ ತಗುಲಿದೆ. ಇದರಿಂದ ಲಾರಿ ಹೊತ್ತಿ ಉರಿದು, ಲಾರಿಯಲ್ಲಿದ್ದ ಫ್ಲೈವುಡ್ ಸುಟ್ಟು ಭಸ್ಮವಾಗಿವೆ. ದಾಬಾ ಬಳಿ ತಮಿಳುನಾಡು ಮೂಲದ ಲಾರಿ ನಿಲ್ಲಿಸಿ ಚಾಲಕ ಅಡುಗೆ ಮಾಡುತ್ತಿರುವಾಗ ಸ್ಟೋವ್ ನಿಂದ ಸ್ಪೋಟಗೊಂಡಿದೆ. ಸ್ಟೋವ್ ಸ್ಫೋಟಗೊಂಡ ಪರಿಣಾಮ ಪಕ್ಕದಲ್ಲಿದ್ದ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಿಂದ ಚಾಲಕನಿಗೆ ಕೈ, ಕಾಲು ಮತ್ತಿತರ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಕೇರಳದಿಂದ ಸೊಲ್ಲಾಪುರಕ್ಕೆ ಹೊರಟಿದ್ದ ತಮಿಳುನಾಡು ಮೂಲದ ಲಾರಿ ಇದಾಗಿದೆ.
ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.