ಕೃಷ್ಣಾ ಕಾಲುವೆ ಗುತ್ತಿ ಬಸವಣ್ಣ ಹಾಗೂ ತಿಡಗುಂದಿ ಬ್ರ್ಯಾಂಚ ಕಾಲುವೆಗೆನೀರು ಹರಿಸಲು,ಬಿ ಡಿ ಪಾಟೀಲ ಆಗ್ರಹ..!
ಕಾಲುವೆಗಳಿಗೆ ನೀರು ಹರಿಸಿ, ಕೆರೆಗಳು ತುಂಬಲು ಜೆಡಿಎಸ್ ಆಗ್ರಹ..!
ಇಂಡಿ : ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಮುಂಗಾರು ಕೂರತೆ ಯಿಂದ ಬರ ಆವರಿಸಿದ್ದು, ಬಹುತೇಕ ರೈತರು ಬಿತ್ತನೆ ಮಾಡಿಲ್ಲ, ಕೆಲವೊಂದು ರೈತರು ಬಿತ್ತನೆ ಮಾಡಿದರು ತುಂತುರು ಮಳೆ ಉಪಯೋಗವಾಗಿಲ್ಲ. ಕಬ್ಬು,ನಿಂಬೆ, ದಾಳಿಂಬೆ ಹಾಗೂ ಇತರೆ ವಾಣಿಜ್ಯ ಬೆಳೆಗಳು ಮಳೆ ಕೂರತೆಯಿಂದ ಬೆಳೆಗಳು ಕಳೆಗುಂದಿದೆ.
ಮಹಾರಾಷ್ಟ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು, ಆಲಮಟ್ಟಿ ಅಣೆಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಶೇಖರಣೆಯಾಗಿದೆ. ಕೂಡಲೆ ಸಂಬಂಧಿಸಿದ ಇಲಾಖೆ ಹಾಗೂ ಸಚಿವರು ಕೃಷ್ಣಾ ಕಾಲುವೆ ಹಾಗೂ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಿಸಬೇಕು. ಜೊತೆಗೆ ತಿಡಗುಂದಿ ಬ್ರ್ಯಾಂಚ ಕಾಲುವೆ ಮೂಲಕ ತಾಲೂಕಿನ 14 ಕೆರೆಗಳನ್ನು ತುಂಬಿಸಲು ಕ್ರಮಕೈಗೊಳ್ಳಬೇಕು.
ಮಳೆಕೂರತೆಯಿಂದ ಬತ್ತಿದ ಕೆರೆ ಹಾಗೂ ಹಳ್ಳ ಕೂಳಗಳಿಗೆ ನೀರು ಹರಿಸುವುದರಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗುವುದು. ಏಕೆಂದರೆ ಮಳೆಗಾಲದಲ್ಲಿ ಕೆಲವೊಂದು ಹಳ್ಳಿಗಳಲ್ಲಿ ಟ್ಯಾಂಕರಗಳಿಂದ ನೀರು ಪೂರೈಕೆ ಮಾಡುತ್ತಿದ್ದು, ಕೂಡಲೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಸರಕಾರ ಜನಜಾನುವಾರುಗಳ ಹಿತದೃಷ್ಟಿಯಿಂದ ನೀರು ಹರಿಸಬೇಕು ಎಂದು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಆಗ್ರಹಿಸಿದ್ದಾರೆ.