ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ
ವಿಜಯಪುರ ನ.10 : 2025-26ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಹಾಗೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರಾಜ್ಯ ಸರ್ಕಾರದಿಂದ ಜಾರಿಗೊಳಿಸಲಾಗುತ್ತಿದ್ದು, ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ವಿವಿಧ ಬೆಳೆಗಳಿಗೆ ವಿಮಾ ಮೊತ್ತ ನಿಗದಿ ಪಡಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ರೈತರು ಬೆಳೆ ವಿಮಾ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಮಳೆಯಾಶ್ರಿತ ಪ್ರತಿ ಹೆಕ್ಟರ್ ಕುಸುಬೆ ಬೆಳೆಗೆ 465 ರೂ., ಪ್ರತಿ ಹೆಕ್ಟರ್ ಸೂರ್ಯಕಾಂತಿಗೆ 611.25 ರೂ., ನೀರಾವರಿ ಆಶ್ರಿತ ಪ್ರತಿ ಹೆಕ್ಟರ್ ಸೂರ್ಯಕಾಂತಿಗೆ 731.25 ರೂ., ವಿಮಾ ಮೊತ್ತ ನಿಗದಿ ಪಡಿಸಲಾಗಿದ್ದು, ನೋಂದಣಿಗೆ ನವೆಂಬರ್ 11 ಕೊನೆಯ ದಿನವಾಗಿದೆ.
ಮಳೆ ಆಶ್ರಿತ ಪ್ರತಿ ಹೆಕ್ಟರ್ ಜೋಳ ಬೆಳೆಗೆ 573.75ರೂ. ಹಾಗೂ ನೀರಾವರಿ ಆಶ್ರಿತ ಪ್ರತಿ ಹೆಕ್ಟರ್ ಜೋಳಕ್ಕೆ 678.75ರೂ. ವಿಮಾ ಮೊತ್ತ ನಿಗದಿ ಪಡಿಸಲಾಗಿದ್ದು, ವಿಮಾ ನೋಂದಣಿಗೆ ನವೆಂಬರ್ 15 ಕೊನೆಯ ದಿನವಾಗಿದೆ.
ಮಳೆಯಾಶ್ರಿತ ಪ್ರತಿ ಹೆಕ್ಟರ್ ಗೋಧಿಗೆ 483.75 ರೂ. ವಿಮಾ ಮೊತ್ತ ನಿಗದಿ ಪಡಿಸಲಾಗಿದ್ದು, ನವೆಂಬರ್ 15 ಕೊನೆಯ ದಿನ ಹಾಗೂ ನೀರಾವರಿ ಆಶ್ರಿತ ಗೋಧಿಗೆ 727.5 ರೂ ವಿಮಾ ಮೊತ್ತ ನಿಗದಿ ಪಡಿಸಲಾಗಿದ್ದು, ನೋಂದಣಿಗೆ ಡಿಸೆಂಬರ್ 15 ಕೊನೆಯ ದಿನವಾಗಿದೆ. ನೀರಾವರಿ ಆಶ್ರಿತ ಪ್ರತಿ ಹೆಕ್ಟರ್ ಮುಸುಕಿನ ಜೋಳಕ್ಕೆ 967.5ರೂ. ಬೆಲೆ ನಿಗದಿ ಪಡಿಸಲಾಗಿದ್ದು, ವಿಮಾ ನೋಂದಣಿಗೆ ಡಿಸೆಂಬರ್ 1 ಕೊನೆಯ ದಿನವಾಗಿದೆ. ಮಳೆ ಆಶ್ರಿತ ಪ್ರತಿ ಹೆಕ್ಟರ್ ಕಡಲೆ ಬೆಳೆಗೆ 521.25ರೂ. ಹಾಗೂ ನೀರಾವರಿ ಆಶ್ರಿತ ಪ್ರತಿ ಹೆಕ್ಟರ್ ಕಡಲೆಗೆ 577.5ರೂ ವಿಮಾ ಮೊತ್ತ ನಿಗದಿ ಪಡಿಸಲಾಗಿದ್ದು, ವಿಮಾ ನೋಂದಣಿಗೆ ಡಿಸೆಂಬರ್ 31 ಕೊನೆಯ ದಿನವಾಗಿದೆ.
ಬೇಸಿಗೆ ಹಂಗಾಮಿ ನೀರಾವರಿ ಆಶ್ರಿತ ಬೆಳೆಗಳಾದ ಶೇಂಗಾಗೆ 986.25 ರೂ. ಸೂರ್ಯಕಾಂತಿಗೆ 731.25 ಹಾಗೂ ಈರುಳ್ಳಿಗೆ 4025 ರೂ ವಿಮಾ ಮೊತ್ತ ನಿಗದಿ ಪಡಿಸಲಾಗಿದ್ದು, ನೋಂದಣಿಗೆ ಫೆಬ್ರುವರಿ 27 ಕೊನೆಯ ದಿನವಾಗಿದೆ.
ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಗೆ ಈ ಯೋಜನೆಗಳು ಅನ್ವಯವಾಗಲಿದ್ದು, ಬೆಳೆ ಸಾಲ ಪಡೆಯದ ರೈತರು ನೋಂದಣಿಗಾಗಿ ಅರ್ಜಿಯೊಂದಿಗೆ ಭೂಮಿ ಹೊಂದಿದ್ದ ದಾಖಲಾತಿಗಳೊಂದಿಗೆ ಪಹಣಿ, ಆಧಾರ ಸಂಖ್ಯೆ ಜೋಡಿಸಿದ ಬ್ಯಾಂಕ್ ಪಾಸ್ ಬುಕ್ ಹಾಗೂ ಆಧಾರದ ಸಂಖ್ಯೆಯೊಂದಿಗೆ ಡಿಸಿಸಿ/ಇತರೆ ಬ್ಯಾಂಕ್ ಗ್ರಾಮ ಒನ್ ಮತ್ತು ಸಿ.ಎಸ್.ಸಿ ಕೇಂದ್ರಗಳಿಗೆ ಸಂಪರ್ಕಿಸಬಹುದಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದಾಗಿದೆ ಎಂದು ವಿಜಯಪುರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















