ಮನೆಗೆ ಐದು ಗ್ಯಾರಂಟಿ – ಮನೆಗೊಂದು ರಂಗೋಲಿ!
ಕನಕೋತ್ಸವದ ಪ್ರಯುಕ್ತ ಕನಕಪುರ ತಾಲೂಕಿನ ಕೆರಳಾಳುಸಂದ್ರ, ವಿರೂಪಸಂದ್ರ, ಲಕ್ಷ್ಮೀಪುರ, ಚಾಕನಹಳ್ಳಿ, ಗೌಡಹಳ್ಳಿ, ಕಡವೇಕೆರೆದೊಡ್ಡಿ, ಕುರುಬರದೊಡ್ಡಿ ಗ್ರಾಮಗಳಲ್ಲಿ ಇಂದು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ಸ್ಥಳೀಯರೊಂದಿಗೆ ಕೆರಳಾಳುಸಂದ್ರ ಗ್ರಾಮಕ್ಕೆ ಭೇಟಿ ನೀಡಿ, ಮಹಿಳೆಯರು, ಯುವತಿಯರು ಬಿಡಿಸಿದ ಬಣ್ಣ ಬಣ್ಣದ ರಂಗೋಲಿಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದೆ.


















