ರಾಷ್ಟ್ರೀಯ ಆನೆಕಾಲು ರೋಗ ರಕ್ತ ಪರಿಕ್ಷೆ ಮೌಲ್ಯ ಮಾಪನತಂಡ ; ವೈದ್ಯಾಧಿಕಾರಿ ಡಾ. ಪ್ರಶಾಂತ ಧೂಮ್ ಗೊಂಡ..
ರಾಷ್ಟ್ರೀಯ ಆನೆಕಾಲು ರೋಗ ರಕ್ತ ಪರೀಕ್ಷೆ..!
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ..! ಡಾ.ಪ್ರಶಾಂತ್ ಧೂಮಗೊಂಡ
ಇಂಡಿ : ರಾಷ್ಟ್ರೀಯ ಆನೇಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿ ನಗರ ಬಾಲಭಾರತಿ ವಿದ್ಯಾ ಸಂಸ್ಥೆಯಲ್ಲಿ ರೋಗ ಪ್ರಸರಣ ಮೌಲ್ಯಮಾಪನ ಸಮೀಕ್ಷೆ ತಂಡ ಶಾಲಾ ಮಕ್ಕಳ ರಕ್ತ ಪರೀಕ್ಷೆ ಹಮ್ಮಿಕೊಂಡಿರುವ ತಂಡಕ್ಕೆ ಆಡಳಿತ ಜಿಲ್ಲಾ ರಾಷ್ಟ್ರೀಯ ರೋಗ ನಿರ್ವಾಹಕ ನಿಯಂತ್ರಣ ಕಾರ್ಯಕ್ರಮ ಅಧಿಕಾರಿಗಳು ಡಾ ಜೈಬನ್ನಿಸಾ ಬೀಳಗಿ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಆಯ್ದ ಶಾಲೆಗಳಲ್ಲಿ 4 ರಿಂದ ಅಗಸ್ಟ್ 8 ಸಪ್ಟೆಂಬರ್ ವರೆಗೆ 1 ಮತ್ತು 2 ನೆಯ ತರಗತಿ ಮಕ್ಕಳಿಗೆ ರಕ್ತ ಪರೀಕ್ಷೆ ಮಾಡಲಾಗುವುದು ಅದಕ್ಕೆ, ಕರ್ನಾಟಕ ಸರ್ಕಾರದ ಸುತ್ತೋಲೆ ಕೂಡ ಬಂದಿರುವುದು ಶಾಲಾ ಮುಖ್ಯಗುರುಗಳು ಹಾಗೂ ಶಿಕ್ಷಕರು ಸಹಕರಿಸಬೇಕೆಂದು ಹೇಳಿದರು.
ವೈದ್ಯಾಧಿಕಾರಿಗಳು ಡಾ ಪ್ರಶಾಂತ್ ಮಾತನಾಡಿದ ಅವರು, ಉಚ್ಚಲೆರಿಯ ಕ್ಯೂಲೆಕ್ಸ್ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಈ ಕಾಯಿಲೆ ಹರಡುತ್ತದೆ. ಈ ಸೊಳ್ಳೆ ಕೊಳಚೆ ಚರಂಡಿಗಳ ನೀರಿನಲ್ಲಿ ಉತ್ಪತ್ತಿಯಾಗುವುದು. ಅದನ್ನು ತಡೆಗಟ್ಟಲು ಗ್ರಾಮಸ್ಥರು ತಮ್ಮ ಮನೆಯ ಸುತ್ತಮುತ್ತ ವಾತಾವರಣ ಶಚಿತ್ವ ಇಟ್ಟಕೊಳ್ಳೊವುದು. ಅದಲ್ಲದೇ ಚರಂಡಿಗಳಲ್ಲಿ ನೀರು ನಿಲ್ಲದಂತೆ ಕೊಳಚೆ ಹರಿದು ಹೊಗುವಂತೆ ಮಾಡುವುದು. ತಿಪ್ಪೆ ಗುಂಡಿಗಳಲ್ಲಿ ನೀರು ಇಂಗುವಿಕೆ ಹಾಗೂ ನೀರನ್ನು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಆದರೆ ಅದು ಗ್ರಾಮ ಪಂಚಾಯತ್ ಕೆಲಸ ಕಾರ್ಯ ಎಂದು ಸುಮ್ನೆ ಕೂಡಬಾರದು. ಒಂದು ವೇಳೆ ನಿರ್ಲಕ್ಷ್ಯ ಮಾಡಿದ್ರೆ ನಮ್ಮ ಆರೋಗ್ಯ ಹಾನಿಗೆ ನಾವೇ ಕಷ್ಟಪಡಬೇಕಾಗುತ್ತದೆ. ಪರಿಸರ ಸ್ವಚ್ಚತೆಗೆ ಆದ್ಯತೆ ನೀಡಿದ್ರೆ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಉಳಿಯುತ್ತೆದೆ ಎಂದು ಹೇಳಿದರು.
ಪ್ರಸ್ತುತ ಸಂದರ್ಭದಲ್ಲಿ ಡಬ್ಲ್ಯೂಎಚ್ ಓ ಸಂಸ್ಥೆಯ ಪ್ರತಿನಿಧಿ ಡಾ. ಸಮಧಾನ ಬೇಬಾಜೆ, ಸಂತೋಷ ಬೋಸಲೆ, ಹಾಗೂ ಸಂಸ್ಥೆಯ ಅಧ್ಯಕ್ಷ ಶಿಖಂದರ ಭಾಷಾ, ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ಎಸ್ ಎಚ ಅತನೂರ್ .ಪ್ರಯೋಗಾಲಯ ತಂತ್ರಜ್ಞಾಧಿಕಾರಿ ಅಶೋಕ್ ಬಿರಾದಾರ್ .ಆರೋಗ್ಯ ನಿರೀಕ್ಷಣಾಧಿಕಾರಿ ರಾಜು ದಶವಂತ. ಪ್ರದೀಪ್ ಬೂದಿಹಾಳ ಮತ್ತು ಶಾಲಾ ಮುಖ್ಯಗುರುಗಳು ಹಾಗೂ ಶಿಕ್ಷಕವೃಂದ ಉಪಸ್ಥಿತರಿದ್ದರು