ಅಫಜಲಪುರ: ಕಳೆದ ನಾಲ್ಕೈದು ವರ್ಷಗಳ ದಾಖಲಾತಿಗಳನ್ನು ಪರಿಶೀಲಿಸಿದಾಗ ಕಾಲೇಜಿನ ಬೆಳವಣಿಗೆ ಬಹಳಷ್ಟು ಖುಷಿ ತಂದಿದೆ. ಆದರೆ ವಿದ್ಯಾರ್ಥಿಗಳಿಗನುಗುಣವಾಗಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಎಂದು ಕನಾಟಕ ಆಡಳಿತ ಸುಧಾರಣಾ ಆಯೋಗದ ಅದ್ಯಕ್ಷ ಟಿ.ಎಂ ವಿಜಯಭಾಸ್ಕರ್ ತಿಳಿಸಿದರು.
ಅವರು ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಕಾಲೇಜಿನ ಪರಿಸರ ಉತ್ತಮವಾಗಿದೆ. ದಾಖಲಾತಿಯಲ್ಲಿ ಗಣನೀಯ ಏರಿಕೆಯಾಗಿದೆ. ಅದರಂತೆ ಫಲಿತಾಂಶವು ಚೆನ್ನಾಗಿ ಬಂದಿದೆ. ಸರ್ಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಿ. ಗುಣಮಟ್ಟದ ಶಿಕ್ಷಣ ನೀಡಿ ಎಂದು ಸಲಹೆ ನೀಡಿದರು.
ಪ್ರಭಾರಿ ಪ್ರಾಚಾರ್ಯ ಡಾ. ಸಂತೋಷ ಹುಗ್ಗಿ ಮಾತನಾಡುತ್ತಾ ಕಾಲೇಜು ಪಟ್ಟಣದಿಂದ ೧.೫ ಕಿ.ಮಿ ದೂರವಿದ್ದು ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಬಸ್ಸಿನ ಸೌಕರ್ಯ ಕಲ್ಪಿಸಬೇಕು. ಕಾಲೇಜಿನ ಆವರಣದಲ್ಲಿ ಕ್ಯಾಂಟಿನ್ ವ್ಯವಸ್ಥೆ ಮಾಡಬೇಕು. ಸುಸಜ್ಜಿತ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರದಿಂದ ಮಂಜೂರಾದ ಲ್ಯಾಬ್‌ಗಳ ನಿರ್ವಹಣೆಗಾಗಿ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸಿದರೆ ಸರ್ಕಾರದಿಂದ ಬಂದ ಕಂಪ್ಯೂಟರ್‌ಗಳು ವಿದ್ಯಾರ್ಥಿಗಳ ಕಲಿಕೆಗೆ ಉಪಯುಕ್ತವಾಗಲಿವೆ ಎಂದರು.
ಕರ್ಜಗಿ ಪದವಿ ಕಾಲೇಜಿನ ಪ್ರಾಚಾರ್ಯ ಶರಣಬಸಪ್ಪ ಅವಟೆ ಮಾತನಾಡುತ್ತಾ ತಾವು ಅಫಜಲಪುರ ಪದವಿ ಕಾಲೇಜಿನ ಪ್ರಾಚಾರ್ಯರಾಗಿದ್ದ ಅವಧಿಯಲ್ಲಿ ಸಾಕಷ್ಟು ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಲ್ಯಾಬ್, ಸಭಾ ಭವನ ಮಂಜೂರು ಮಾಡಿಸಲಾಗಿದೆ. ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಪರಿಣಾಮ ಇಂದು ಅತೀ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯುವಂತಾಗಿದೆ. ಕೆಲ ತಿಂಗಳ ಹಿಂದಷ್ಟೆ ಕರ್ಜಗಿ ಪದವಿ ಕಾಲೇಜಿಗೆ ನನ್ನ ವರ್ಗಾವಣೆಯಾಗಿದ್ದು ಅಲ್ಲಿನ ಕಾಲೇಜಿನಲ್ಲೂ ಕೂಡ ಇಂಥದ್ದೆ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದ್ದೇನೆ. ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಅತಿಥಿ ಉಪನ್ಯಾಸಕರ ಒಕ್ಕೂಟದ ತಾಲೂಕು ಅದ್ಯಕ್ಷ ಹೀರು ರಾಠೋಡ ಮಾತನಾಡುತ್ತಾ ಅತಿಥಿ ಉಪನ್ಯಾಸಕರಿಗೆ ಅನಾರೋಗ್ಯ ಹಾಗೂ ತುರ್ತು ಸಂದರ್ಭದಲ್ಲಿ ರಜೆ ನೀಡಬೇಕು. ಅಲ್ಲದೆ ತಿಂಗಳಿಗೊಂದು ವೇತನ ಸಹಿತ ರಜೆ ನೀಡಬೇಕು. ೨೦೦೯ರೊಳಗಾಗಿ ಎಂಫೀಲ್ ಪದವಿ ಪಡೆದವರನ್ನು ಪಿಹೆಚ್‌ಡಿ ಎಂದು ಪರಿಗಣಿಸಬೇಕೆಂದು ಮನವಿ ಮಾಡಿಕೊಂಡರು.
ಹಿರಿಯ ಉಪನ್ಯಾಸಕಿ ರಾಜೇಶ್ವರಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕರ್ಜಗಿ ಕಾಲೇಜಿನ ಪ್ರಾಚಾರ್ಯ ಶರಣಬಸಪ್ಪ ಅವಟೆ, ಡಾ. ಶಾಕೀರಾ ತನ್ವೀರ, ಡಾ. ಸಾವಿತ್ರಿ ಕೃಷ್ಣ, ಡಾ. ದತ್ತಾತ್ರೇಯ ಹೆಚ್, ಡಾ. ಸಂಗಣ್ಣ ಸಿಂಗೆ ಆನೂರ, ಭಗವಾನಸಿಂಗ್ ರಜಪೂತ್, ಡಾ. ಶಾಂತಪ್ಪ ಮೇಲಕೇರಿ, ಡಾ. ಸುರೇಖಾ ಕರೂಟಿ, ಡಾ. ಸುಗುರೇಶ್ವರ, ಶ್ರೀದೇವಿ ರಾಠೋಡ, ಖುತೇಜಾ ನಸ್ರೀನ್, ವೈಜನಾಥ ಭಾವಿ, ಪವನಕುಮಾರ ನಾಯ್ಕೋಡಿ, ಮಡಿವಾಳಪ್ಪ ಮುಗಳಿ, ಗೌರಿಶಂಕರ ಗುರೆ, ಸುರೇಶ ಮುಗಳಿ, ಮಮತಾ ಪಾಟೀಲ್, ಸಿಬ್ಬಂದಿಗಳಾದ ಚಿದಾನಂದ, ಖಾಜಾಲಾಲ್ ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.