ಫೆ. ೧೨ ರಂದು ಕಾರ್ಮಿಕರ ಮುಷ್ಕರದಲ್ಲಿ ಭಾಗಿ
ಇಂಡಿ : ಅಂಗನವಾಡಿ ನೌಕರರಿಗೆ ಎಫ್ ಆರ್ ಎಸ್ ರದ್ದು ಮಾಡಬೇಕು, ಅಂಗನವಾಡಿ ಕೇಂದ್ರಗಳಲ್ಲಿ ವೈ ಫೈ ವ್ಯವಸ್ಥೆ ಮಾಡಬೇಕು, ಅಂಗನÀವಾಡಿ ನೌಕರರನ್ನು ಚುನಾವಣೆ ಕೆಲಸದಿಂದ ಬಿಡುಗಡೆಗೊಳಿಸಬೇಕು ಸೇರಿದಂತೆ ತಮ್ಮ ಹಲವಾರು ಬೇಡಿಕೆಗಳನ್ನು ಆಗ್ರಹಿಸಿ ರಾಜ್ಯಾದಂತ ಫೆ. ೧೨ ರಂದು ನಡೆಯುವ ಮುಷ್ಕರದಲ್ಲಿ ಭಾಗವಹಿಸುವದಾಗಿ ಇಂಡಿ ಅಂಗನವಾಡಿ ನೌಕರರ ಸಂಘದ ಭಾರತಿ ವಾಲಿ ತಿಳಿಸಿದ್ದಾರೆ.
ಈ ಕುರಿತು ಸಿಐ ಟಿಯು ಸಂಘಟನೆಯಿAದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಗೀತಾ ಗುತ್ತರಗಿಮಠ ಇವರಿಗೆ ಭಾರತಿ ವಾಲಿ ಮನವಿ ಸಲ್ಲಿಸಿದರು.
ಇಂಡಿ ತಾಲೂಕಿನ ಇಂಡಿ, ಝಳಕಿ, ಲಚ್ಯಾಣ, ನಾದ ಸೇರಿದಂತೆ ಹನ್ನೆರಡು ವಲಯದ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು.
ಇಂಡಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಇವರಿಗೆ ಅಂಗನವಾಡಿ ಕಾರ್ಯಕರ್ತೇಯರಿಂದ ಮನವಿ ಸಲ್ಲಿಸಿದರು.



















