ಇಂಡಿ: ಗ್ರಂಥವಿಲ್ಲದ ಕೊಣೆ ಆತ್ಮವಿಲ್ಲದ ಶರೀರದಂತೆ,
ಗ್ರಂಥಾಲಯವಿಲ್ಲದ ಶಿಕ್ಷಣ ಸಂಸ್ಥೆ ಹೃದಯವಿಲ್ಲದ ಮಾನವನಂತೆ’ ಎಂದು ಗ್ರಂಥಪಾಲಕ ರಾಘವೇಂದ್ರ
ಇಂಗನಾಳ ಹೇಳಿದರು.
ಶನಿವಾರ ಪಟ್ಟಣದ ಎಸ್.ಎಸ್.ವಿ.ವಿ.ಸಂಘದ ಅಡಿಯಲ್ಲಿ ಬರುವ ಜಿ.ಆರ್.ಗಾಂಧಿ ಕಲಾ, ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ. ದೋಶಿ
ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಭಾರತದ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದ ಪಿತಾಮ ಡಾ. ಎಸ್.ಆರ್. ರಂಗನಾಥನ್ ಅವರ ೧೩೧ನೇ ಜಯಂತಿಯಲ್ಲಿ ಅವರು ಮಾತನಾಡಿದರು.
ಗ್ರಂಥಾಲಯ ವಿಜ್ಞಾನದ ಪಂಚ ಸೂತ್ರಗಳನ್ನು ತಿಳಿಸುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರಸಕ್ತ ಸ್ಪಾರ್ಧಾತ್ಮಕ ಜೀವನದಲ್ಲಿ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರ ಎಸ್.ಬಿ. ಜಾಧವ ಮಾತನಾಡಿ, ‘ಗ್ರಂಥಾಲಯ ಅರಿವಿನ ಜ್ಞಾನದೀವಿಗೆಗಳು ಇಷ್ಟಪಟ್ಟು ಓದಲು ಬರುವವರೆಗೆ ಗ್ರಂಥಾಲಯಗಳು ಜ್ಞಾನದ ಹೊಸ
ಹೊಳಪನ್ನು ನೀಡುವ ಅಕ್ಷಯ ಭಂಡಾರಗಳಾಗಿವೆ’
ಗ್ರಂಥ ನಮಗೆ ತ್ರಿವಿಧ ಜ್ಞಾನವನ್ನು ಒದಗಿಸುತ್ತದೆ.
ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಇದರ
ಮಹತ್ವವನ್ನು ಅರಿತು ತಮ್ಮ ಜ್ಞಾನವೃದ್ಧಿಸಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಹಾಯಕ
ಪ್ರಾಧ್ಯಾಪಕ ಡಾ. ಆನಂದ ನಡವಿನಮನಿ, ಡಾ. ವಿಶ್ವಾಸ.
ಕೋರವಾರ, ಡಾ. ಪಿ.ಕೆ. ರಾಠೋಡ, ಡಾ.ಸುರೇಂದ್ರ ಕೆ,
ಶ್ರೀಶೈಲ, ಡಾ. ಸಿ.ಎಸ್. ಬಿರಾದಾರ, ಡಾ. ಜಯಪ್ರಸಾದ್ ಡಿ, ಡಾ. ಶ್ರೀಕಾಂತ ರಾಠೋಡ, ಎಮ್.ಆರ್. ಕೋಣದೆ ಸೇರಿದಂತೆ ಅತಿಥಿ ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.