ವಿದ್ಯುತ್ ತಗುಲಿ ರೈತನ ಸಾವು..!
ಚಡಚಣ : ವಿದ್ಯುತ್ ತಗುಲಿ ತೋಟದ ವಸತಿಯಲ್ಲಿ ರೈತ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ತದ್ದೇವಾಡಿ ಗ್ರಾಮದಲ್ಲಿ ನಡೆದಿದೆ.
ತದ್ದೇವಾಡಿ ಗ್ರಾಮದ ತೋಟದ ವಸ್ತಿಯಲ್ಲಿ ಇರುವ ಶೇಡ್ ನಲ್ಲಿ ಧನ ಕರಗಳನ್ನು ಕಟ್ಟಲು ತೆರಳಿದಾಗ ವಿದ್ಯುತ್ ತಗುಲಿ ಮಹಾದೇವ ಸೋನಕನಹಳ್ಳಿ ವಯಾ 48 ಮೃತ ದುರ್ದೈವಿಯಾಗಿದ್ದಾರೆ.
ಈ ಕುರಿತು ಝಳಕಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೋಲಿಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.