ಸೋಲಿನ ಭೀತಿ ಕಾಂಗ್ರೇಸಿಗರಿಗೆ… !
ರಾಜಕೀಯ ಪ್ರಜ್ಞಾವಂತಿಕೆ ಇರಲಿ…!
ಎರಡು ಕುಟಂಬದ ಸಂಘರ್ಷ ರಾಜಕೀಯವಾಗಿ ಏಳೆಯೋದು ಸರಿನಾ..! ಮಲ್ಲಿಕಾರ್ಜುನ ಕಿವಡೆ
ಇಂಡಿ : ಎರಡು ಕುಟುಂಬಗಳ ಮದ್ಯ ನಡೆದ ಸಂಘರ್ಷ ರಾಜಕೀಯವಾಗಿ ಉಪಯೋಸಿಕೊಳ್ಳೊದು ಎಷ್ಟು ಸರಿ ..? ಸುಖಾ ಸುಮ್ನೆ ದೊಡ್ಡ ಮಟ್ಟದ ಬಣ್ಣ ಹಚ್ಚಿ ಬೇರೆ ಬೇರೆ ರೀತಿಯ ರೂಪ ಕೊಡೊದು ಎಷ್ಟರ ಮಟ್ಟಿಗೆ ಯೋಗ್ಯ ಎಂದು ತಾಲ್ಲೂಕು ಭಾಜಪ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಹೇಳಿದರು.
ಪಟ್ಟಣದ ಭಾಜಪ ಕಾರ್ಯಾಲಯದಲ್ಲಿ ಕರೆದ ಸುದ್ದಿಗೊಷ್ಠಿಯಲ್ಲಿ ಉದ್ದೇಶಿಸಿ ಮಾತಾನಾಡಿದ ಅವರು, ಬಿಜೆಪಿ ಮುಖಂಡರು ಸೋಲಿನ ಬೀತಿಯಿಂದ ಹತಾಶ ಗೊಂಡು ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಪಕ್ಷವೇ ಆಡಳಿತ ಮಾಡುತ್ತಿದೆ,ಆದರೆ ತಾಲೂಕನಲ್ಲಿ ಎಲ್ಲಿ ಆದ್ರೂ ಬಿಜೆಪಿ ಪಕ್ಷದಿಂದ ಹಲ್ಲೆಯಾದ ಉದಾಹರಣೆಗಳು ಕಂಡಿವಿಯೇ..? ಅಲ್ಲಿ ನಡೆದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳದೆ ಸುಖಾ ಸುಮ್ನೆ ಬಿಜೆಪಿ ಪಕ್ಷದ & ಮುಖಂಡರ ಮೇಲೆ ತಪ್ಪಾಗಿ ಆರೋಪ ಮಾಡಿದ್ದು, ಅದು ರಾಜಕೀಯವಾಗಿ ಬಳಸಿಕೊಂಡಿದ್ದು ಶೋಬೆ ತರುವಂತದಲ್ಲ ಎಂದು ಹೇಳಿದರು.
ಇನ್ನೂ ಅಲ್ಲಿ ನಡೆದಿದ್ದು ಯುವತಿ ಮೇಲೆ ದೌರ್ಜನ್ಯ ಅದನ್ನು ಸರಪಡಿಸುವುದು ಬಿಟ್ಟು ರಾಜಕೀಯವಾಗಿ ಉಪಯೋಗಿಸಿಕೊಳ್ಳುವುದು ತಪ್ಪು. ಈ ಕೂಡಲೇ ಆ ಯುವತಿ ನ್ಯಾಯ ದೊರಕಿಸಬೇಕು ಇಲ್ಲವಾದರೆ ಹೋರಾಟಕ್ಕೆ ಇಳಿಯಬೇಕಾಗುತ್ತೆದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಾಜಪ ಮುಖಂಡ ಅನೀಲ ಜಮಾದಾರ, ಸಿದ್ಧಲಿಂಗ ಹಂಜಗಿ, ಶೀಲವಂತ ಉಮರಾಣಿ, ಶಾಂತು ಕಂಬಾರ, ರಾಜಶೇಖರ ಯರಗಲ್ ಉಪಸ್ಥಿತರಿದ್ದರು.