ಇಂಡಿ : ಫೇಸ್ಬುಕ್ ನಲ್ಲಿ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿದ್ದ ವ್ಯಕ್ತಿಯ ಹತ್ಯೆಗೈದಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ರಘು ಕಣಮೇಶ್ವರ, ತುಳಸಿರಾಮ ಹರಿಜನ, ಗುರುಸಿದ್ದ ಡೋಣಿ ಬಂಧಿತ ಆರೋಪಿಗಳನ್ನು ಬಂದಿಸಿದ್ದೆವೆ ಎಂದು ಇಂಡಿ ಡಿ.ವಾಯ್.ಎಸ್.ಪಿ ಶ್ರೀಧರ ದೊಡ್ಡಿ ಹೇಳಿದರು . ಪಟ್ಟಣದ ಡಿ.ವಾಯ್.ಎಸ್.ಪಿ ಕಛೇರಿಯ ಕಾರ್ಯಾಲಯದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತಾನಾಡಿದ ಅವರು, ಇನ್ನು ಆರೋಪಿಗಳು ರಮೇಶ ಧಾರಸಂಗನ್ನು ನಗರದಲ್ಲಿ ಬರ್ಬರವಾಗಿ ಹತ್ಯೆಗೈದು ಕುಮಟಗಿ ತಾಂಡಾದಲ್ಲಿ ಮೃತ ದೇಹ ಎಸೆದು ಪರಾರಿಯಾಗಿದ್ದರು. ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ಆರೋಪಿಗಳು ಬಂಧಿಸಿದ್ದೆವೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.