ಎಕ್ಸಪ್ರೆಸ್ ರೈಲು ಲಚ್ಯಾಣಕ್ಕೆ ನಿಲುಗಡೆ – ಜಿಗಜಿಣಗಿ ಭರವಸೆ..
ಇಂಡಿ : ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ದರ್ಶನಕ್ಕೆ ಎಕ್ಸಪ್ರೆಸ್ ರೈಲಿನ ಮೂಲಕ ಬರುವ ಭಕ್ತಾದಿಗಳು ರೈಲು ನಿಲ್ಲದ ಕಾರಣ ದೂರದ ಇಂಡಿ ರೈಲು ನಿಲ್ದಾಣ ವರೆಗೆ ಸಂಚರಿಸಿ ಈ ಕ್ಷೇತ್ರ ತಲುಪುತ್ತಿದ್ದಾರೆ. ಆದ್ದರಿಂದ ನಿತ್ಯ ಎಕ್ಸಪ್ರೆಸ್ ರೈಲು ನಿಲುಗಡೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸಂಸದ ಜಿಗಜಿಣಗಿ ಮಾತನಾಡಿ ಈಗಾಗಲೇ ಮೇಲಾಧಿಕಾರಿಗಳ
ಜೊತೆ ಮಾತನಾಡಿದ್ದು ಕೆಲವು ರೈಲು ನಿಲುಗಡೆಗೆ
ಭರವಸೆ ನೀಡಿದ್ದು ಬರುವ ದಿನಗಳಲ್ಲಿ ಎಕ್ಸಪ್ರೆಸ್ ರೈಲು
ನಿಲುಗಡೆಗೆ ಭರವಸೆ ನೀಡಿದರು.
ಸ್ಥಳಿಯ ಡಿಎಸ್‍ಎಸ್ ಮುಖಂಡ ಅಪ್ಪಾಶ ಕಾಂಬಳೆ ಮಾತನಾಡಿ ಮಳೆಯಾದರೆ ಸುರಕ್ಷಿತ ಆಸರೆ ಇಲ್ಲ, ರಾತ್ರಿಯ ಸಮಯದಲ್ಲಿ ಪ್ಲಾಟ್ ಫಾರ್ಮ ಮೇಲೆ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ, ಕಳಪೆ ಕಾಮಗಾರಿಯಿಂದ ಆಸನಕ್ಕೆ ಅಳವಡಿಸಿದ ಪರ್ಸಿ ಕಿತ್ತುಹೋಗಿವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶೌಚ್ಛಾಲಯ ವ್ಯವಸ್ಥೆ ಇಲ್ಲ ಎಂದು ಮನವಿ ಸಲ್ಲಿಸಿದರು.
ಸಾಮಾಜಿಕ ಕಾರ್ಯಕರ್ತ ಸಂಗಮೇಶ ಮುಜಗೊಂಡ
ಮಾತನಾಡಿ, ಗ್ರಾಮದಲ್ಲಿನ ರೇಲ್ವೆ ಗೇಟ್ ಮೇಲಿಂದ
ಮೇಲೆ ಹಾಕುತ್ತಿರುವದರಿಂದ ವಾಹನ ಸವಾರರಿಗೆ ತೀವ್ರ
ತೊಂದರೆಯಾಗುತ್ತಿದೆ. ಕೂಡಲೆ ರೇಲು ಸೇತುವೆ,
ಇಲ್ಲ ಅಂಡರ್ ಪಾಸ್ ಮಾರ್ಗ ನಿರ್ಮಿಸಬೇಕು ಎಂದು
ಒತ್ತಾಯಿಸಿದರು. ಸಂಸದ ಜಿಗಜಿಣಗಿಯವರು ಮೇಲಾಧಿಕಾರಿಗಳ ಜೊತೆಗೆ ಮಾತನಾಡಿ ಎಲ್ಲ ವ್ಯವಸ್ಥೆ ಸರಿಪಡಿಸುವದಾಗಿ ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಗನ್ನಾಥ ಕೋಟೆ, ಗ್ರಾಮ ಪಂಚಾಯಿತಿ ಸದಸ್ಯ ಅಶೋಕಗೌಡ ಪಾಟೀಲ, ಯಶವಂತರ ಬಿರಾದಾರ, ಭೀಮರಾಯಗೌಡ ಪಾಟೀಲ,ಮಲ್ಲೇಶಿ ಮುಜಗೊಂಡ ಹಾಗೂ ಇನ್ನಿತರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವಡೆ ಹಾಗೂ ಸ್ಥಳಿಯ ಗ್ರಾಮಸ್ಥರು ಮತ್ತಿತರಿದ್ದರು.