ಒಂದೇ ವಾರದಲ್ಲಿ ವೈ ಎಸ್ ಆರ್ ಪಕ್ಷ ತೊರೆದ ಮಾಜಿ ಕ್ರಿಕೆಟಿಗ.. ಯಾರು ಗೊತ್ತಾ..?
Voice Of Janata News DesK : Political :
ಇತ್ತೀಚೆಗೆ ಆಂದ್ರಪ್ರದೇಶದ ಮುಖ್ಯ ಮಂತ್ರಿ ಜಗನ್ ಮೋಹನ ರೆಡ್ಡಿ ನೇತೃತ್ವದಲ್ಲಿ ಮಾಜಿ ಕ್ರಿಕೆಟಿಗ ಅಂಬಟಿ ರಾಯಡು ವೈ ಎಸ್ ಆರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು. ಆದರೆ ಇದೀಗ ಸಾಮಾಜಿಕ ಜಾಲತಾಣದ ಮೂಲಕ ಪಕ್ಷ ತೊರೆಯುವ ಸಂದೇಶ ಅಂಬಟಿ ರಾಯಡು ನೀಡಿದ್ದು, ನೆಟ್ಟಿಗರು ನಿಟ್ಟುಸಿರು ಹಿಡಿದು ನೊಡುವಂತಾಗಿದೆ.
ನಾನು ವೈಎಸ್‌ಆರ್‌ಸಿಪಿ ಪಕ್ಷವನ್ನು ತ್ಯಜಿಸಲು ನಿರ್ಧರಿಸಿದ್ದೇನೆ. ಅಲ್ಲದೆ ಸ್ವಲ್ಪ ಸಮಯದವರೆಗೆ ರಾಜಕೀಯದಿಂದ ದೂರವಿರಲು ಬಯಸಿದ್ದೇನೆ ಎಂದು ಈ ಮೂಲಕ ತಿಳಿಯಪಡಿಸುತ್ತೇನೆ. ನನ್ನ ಮುಂದಿನ ನಡೆಯನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು, ಎಲ್ಲರಿಗೂ ಧನ್ಯವಾದಗಳು ಎಂದು ಅಂಬಾಟಿ ರಾಯುಡು ಸೋಷಿಯಲ್ ಮೀಡಿಯದಲ್ಲಿ ಬರೆದುಕೊಂಡಿದ್ದಾರೆ.
ಅಂಬಟಿ ರಾಯಡು ರಾಜಕೀಯ ಆಸಕ್ತಿ ಹೊಂದಿದ್ದು, ಅವರು ಕೂಡಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗುಂಟೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅಂದಕೊಂಡತೆ ಟಿಕೆಟ್ ಸಿಗುವ ಸಾದ್ಯತೆ ಕಡಿಮೆ ಇರುವುದರಿಂದ ಪಕ್ಷದಿಂದ ಹೊರಗೆ ಉಳಿಯುವ ನಿರ್ಧಾರ ಮಾತು..!
ಒಟ್ಟಿನಲ್ಲಿ ವೈಎಸ್ಆರ್ ಕಾಂಗ್ರೆಸ್ ಮೂಲಕ 2ನೇ ಇನಿಂಗ್ಸ್ ಆರಂಭಿಸಿದ ರಾಯುಡು ಒಂದೇ ವಾರದಲ್ಲಿ ರಾಜಕೀಯ ನಡೆಯನ್ನು ಬದಲಿಸಿರುವುದು ಅಚ್ಚರಿಯೇ ಸರಿ.