ಇವಿಎಂ ಮಸೀನು ವಿಜಯಪುರಕ್ಕೆ ರವಾನೆ
268 ಮತ ಯಂತ್ರಗಳು ಪೋಲಿಸ ಬಂದೋಬಸ್ತಿನಲ್ಲಿ ವಿಜಯಪುರಕ್ಕೆ : ಎಸಿ ಅಬೀದ್ ಗದ್ಯಾಳ
ಇಂಡಿ : ಮೇ 7 ರಂದು ಇಂಡಿ ಮತಕ್ಷೇತ್ರದಲ್ಲಿ ನಡೆದ
ಲೋಕಸಭಾ ಚುನಾವಣೆಯ ಮತ ಯಂತ್ರಗಳನ್ನು ರಾತ್ರಿ 3 ಗಂಟೆಗೆ ವಿಜಯಪುರಕ್ಕೆ ರವಾನಿಸಲಾಗಿದೆ ಎಂದು ಸಹಾಯಕ ಚುನಾವಣೆ ಅಧಿಕಾರಿ ಮತ್ತು ಕಂದಾಯ
ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.
268 ಮತ ಯಂತ್ರಗಳನ್ನು ಪೋಲಿಸ ಬಂದೋಬಸ್ತಿನಲ್ಲಿ ಇಂಡಿಯ ಆದರ್ಶ ಪ್ರೌಢಶಾಲೆಯಿಂದ ವಿಜಯಪುರದ ಸೈನಿಕ ಶಾಲೆಗೆ ಕಳುಹಿಸಲಾಗಿದೆ. ಈ ವೇಳೆಯಲ್ಲಿ ತಹಸೀಲ್ದಾರ ಮಂಜುಳಾ ನಾಯಕ, ಡಿ.ಎಸ್.ಪಿ ಎಚ್.ಎಸ್. ಜಗದೀಶ, ಪಿಎಸ್ಐ ಮಂಜುನಾಥ ಹುಲಕುಂದ, ಪಿಡಿಒ ಬಸವರಾಜ ಬಬಲಾದ, ಬಸವರಾಜ
ರಾಹೂರ,ಆರ್.ಬಿ.ಮೂಗಿ ಮತ್ತಿತರಿದ್ದರು.
ಇಂಡಿಯ ಆದರ್ಶ ಶಾಲೆಯಿಂದ ಎಸಿ ಅಬೀದ್
ಗದ್ಯಾಳರವರು ಮತಯಂತ್ರಗಳನ್ನು
ವಿಜಯಪುರಕ್ಕೆ ರವಾನಿಸಿದರು.