ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ನೂತನ ಜಿಲ್ಲಾ ಘಟಕ ಆರಂಭ..
ಪ್ರತಿಯೊಂದು ಸಮುದಾಯವು ಸಂಘಟನೆಗಳಿಂದ ಮುಂಚೂಣಿಗೆ ಬರುತ್ತಿವೆ..
ಚಾಮರಾಜನಗರ : ಪ್ರತಿಯೊಂದು ಸಮುದಾಯವು ಸಂಘಟನೆಗಳಿಂದ ಮುಂಚೂಣಿಗೆ ಬರುತ್ತವೆ ನಂತರ ರಾಜಕೀಯವಾಗಿ ,ಸಾಮಾಜಿಕವಾಗಿ ,ಆರ್ಥಿಕವಾಗಿ ಬಲಿಷ್ಠವಾದ ಛಾಪು ಮೂಡಿಸುತ್ತವೆ. ಅದೇ ರೀತಿಯಲ್ಲಿ ಇಂದು ನಮ್ಮ ರಾಜ್ಯ ಸಂಘವು ನೂತನವಾಗಿ ಚಾಮರಾಜನಗರ ಜಿಲ್ಲೆಯ ಪದಾಧಿಕಾರಿಗಳ ಆಯ್ಕೆ ಸಂಬಂಧ ನೆಡೆದ ಸಭೆಯಲ್ಲಿ ಜಿಲ್ಲಾ ಘಟಕವನ್ನು ಜಿಲ್ಲೆಯ ಎಲ್ಲಾ ತಾಲೂಕುಗಳ ಆದ್ಯತೆ ಹಾಗೂ ಜನಸಂಖ್ಯೆಯ ಆಧಾರದ ಮೇಲೆ ಸಾಮಾಜಿಕ ನ್ಯಾಯದಡಿ ರಚಿಸಲಾಗಿದೆ ಎಂದು ಚಾಮರಾಜನಗರ ಜಿಲ್ಲೆಯ ಅಧ್ಯಕ್ಷರಾದ ನಾಗೇಂದ್ರ ಎಲ್ ತಿಳಿಸಿದರು.
ಚಾಮರಾಜನಗರದ ಗೋವಿಂದೇಗೌಡರ ತೋಟದ ಮನೆಯ ಆವರಣದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾ ಘಟಕವನ್ನು ಚಾಲನೆ ನೀಡಿದ ರಾಜ್ಯ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಅಧ್ಯಕ್ಷರಾದ ಸಿ ಜಿ ಗಂಗಾಧರ್ ಮಾತನಾಡಿ ನಮ್ಮ ಸಮುದಾಯದ ಏಳಿಗೆಗೆ ಸದಾ ನಾವು ಚಿರ ಋಣಿಯಾಗಿರುತ್ತವೆ ಕಟ್ಟಕಡೆಯ ಗ್ರಾಮಿಣ ಭಾಗಕ್ಕು ನಮ್ಮ ಸಂಘವನ್ನು ವಿಸ್ತರಿಸಲು ಪ್ರತಿಯೊಬ್ಬರು ಶ್ರಮಿಸಬೇಕಿದೆ. ನೂತನ ಸಮಿತಿಗೆ ನಾನು ಅಬಾರಿಯಾಗಿದ್ದೇನೆ ಎಂದು ತಿಳಿಸಿದರು. ಇದೇ ವೇಳೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ನೇಮಿಸಿ ಜಿಲ್ಲಾ ಘಟಕಕ್ಕೆ ಚಾಲನೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾಧ್ಯಕ್ಷರಾದ ತೇಜಸ್ ಲೋಕೇಶ್ ಗೌಡ, ಹಾಸನ ಜಿಲ್ಲಾಧ್ಯಕ್ಷರು ಮತ್ತು ರಾಜ್ಯ ಉಪಾಧ್ಯಕ್ಷರು ಮಹಿಳಾ ಘಟಕದ ಅಧ್ಯಕ್ಷರು , ಜಿಲ್ಲಾ ಖಜಾಂಚಿಯಾಗಿ ಹರೀಶ್ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ ಸಿ ಬಾಬು ಸೇರಿದಂತೆ ಇನ್ನಿತರರು ಹಾಜರಿದ್ದು ಜಿಲ್ಲಾ ಘಟಕವನ್ನು ಚಾಲನೆ ನೀಡಿದರು.