ಬಾಲಕೀಯರ ವಸತಿ ನಿಲಯದಲ್ಲಿ ವಿಶ್ವ ಪರಿಸರ ದಿನಾಚರಣೆ
ವಿಜಯಪುರ, ಜೂ. 07 : – ನಗರದ ಕನಕದಾಸ ಬಡಾವಣೆಯ ಹತ್ತಿರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕೀಯರ ವಸತಿ ನಿಲಯಕ್ಕೆ ಇಂದು ಜಿಲ್ಲಾಧಿಕಾರಿ ಟಿ.ಬೂಬಾಲನ್ ಭೇಟಿ ನೀಡಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದದರು.
ಈ ಸಂದರ್ಭದಲ್ಲಿ ಪರಿಸರದ ಮಹತ್ವದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಜಿಲ್ಲೆಯಲ್ಲಿ ಸುಮಾರು 101 ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು ಎಲ್ಲ ವಸತಿ ನಿಲಯಗಳಲ್ಲಿ ಗಿಡ ಮರಗಳನ್ನು ಬೆಳೆಸಬೇಕು ಹಾಗೂ ಅವುಗಳನ್ನು ಸಂರಕ್ಷಿಸಬೇಕು ಗಿಡಮರಗಳು ನಮಗೆ ಉತ್ತಮ ಗಾಳಿ, ಪರಿಸರ, ನೆರಳು ಹಾಗೂ ಉತ್ತಮ ಆರೋಗ್ಯವನ್ನು ಒದಗಿಸುತ್ತವೆ ನಾವೆಲ್ಲರೂ ಗಿಡ ಮರಗಳನ್ನು ಬೆಳೆಸೋಣ ಉಳಿಸೋಣ ಎಂದು ಅವರು ಹೇಳೀದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಶೋಕ ಕಲ್ಯಾಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮೆಹಬೂಬ ತುಂಬರಮಟ್ಟಿ, ಹಾಗೂ ಇಲಾಖೆಯ ಇತರೇ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು