ಸದೃಢ ಸಮಾಜಕ್ಕೆ ಉದ್ಯಮಶೀಲತೆ ಮುಖ್ಯ : ಉದ್ಯಮದಾರ ಮಲ್ಲಿಕಾರ್ಜುನ ಹಾವಿನಾಳಮಠ
ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು ಸದುಪಯೋಗ ಮಾಡಿಕೊಳ್ಳಿ : ಮಲ್ಲಿಕಾರ್ಜುನ ಹಾವಿನಾಳಮಠ
ಇಂಡಿ : ಉದ್ಯಮಶೀಲರು ಸೋಲಿನಿಂದ ಧೃತಿಗೆಡದೇ ಸಮರ್ಥ ಮಾರ್ಗದರ್ಶನ ,ಸ್ಪಷ್ಟ ಗುರಿಯೊಂದಿಗೆ ಸತತ ಪ್ರಯತ್ನ ಮಾಡಿದಾಗ ಯಶಸ್ಸು ಸಾಧ್ಯ. ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು ಸದುಪಯೋಗ ಮಾಡಿಕೊಂಡಾಗ ಸರಕಾರ ರೂಪಿಸುವ ಯೋಜನೆಗಳು ಯಶಸ್ವಿಗೆ ಸಾಕ್ಷಿಯಾಗುತ್ತವೆ ಎಂದು ಉದ್ಯಮದಾರ ಮಲ್ಲಿಕಾರ್ಜುನ ಹಾವಿನಾಳಮಠ ಹೇಳಿದರು.
ಪಟ್ಟಣದ ಸಹನಾ ರೆಸ್ಟೋರೆಂಟ್ ವಿಕೆಜೆ ಇಂಟರ್ನ್ಯಾಷನಲ್ ಸಭಾಭವನದಲ್ಲಿ ಏರ್ಪಡಿಸಿದ್ದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯ ಅಭ್ಯರ್ಥಿಗಳಿಗೆ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅನುಭವ ಹಂಚಿಕೊಂಡರು.
ಸಮಾಜವನ್ನು ಸದೃಢವಾಗಿ ಕಟ್ಟಲು ಉದ್ಯಮಶೀಲತೆ ಬಹಳ ಮುಖ್ಯ, ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಮಹಿಳೆಯರ ಯುವಜನರಲ್ಲಿ ಸಂಚಲನ ಮೂಡಿಸಲು , ಕೌಶಲ್ಯ ಬೆಳಸಲು ಅತ್ಯಂತ ಸೂಕ್ತ ಕಾರ್ಯ ವಿಜಯಪುರ ಸಿಡಾಕ್ ಸಂಸ್ಥೆ ಮಾಡುತ್ತೀರುವುದು ಪ್ರಶಂಸನೀಯ ಕಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿರುವ ಸಿಡಾಕ್ ಜಂಟಿ ನಿರ್ದೇಶಕಿ ಸುಪ್ರೀತಾ ಬ ಬಳ್ಳಾರಿ, ತರಬೇತಿ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ಸಿಡಾಕ್ ಕೇಂದ್ರವು ಸ್ವಯಂ ಉದ್ಯೋಗವನ್ನು ಒದಗಿಸುವುದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಉದ್ಯಮಶೀಲತಾ ಅಭಿವೃದ್ದಿ ತರಬೇತಿಗಳನ್ನು ನೀಡುತ್ತಿದೆ. ಉದ್ಯಮವನ್ನು ಪ್ರಾರಂಭಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಉದ್ಯಮ, ವ್ಯಾಪಾರ ಮತ್ತು ಸರ್ಕಾರಿ ಸಂಸ್ಥೆಗಳೊಂದಿಗೆ ನಿಯಮಿತವಾಗಿ ಸಮಾಲೋಚಿಸಿ, ಉದ್ಯಮಶೀಲತಾ ಪ್ರೇರಣೆ, ಯೋಜನಾ ಅವಕಾಶ ನಿರ್ವಹಣೆ, ಸೂಕ್ಮ ಉದ್ಯಮ ರಚನೆ, ಗುಂಪು ಉದ್ಯಶೀಲತೆ, ಯೋಜನಾ ಮೌಲ್ಯಮಾಪನ ಮತ್ತು ಹಣಕಾಸು ಹೊಂದಿಸುವಿಕೆ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಅದನ್ನು ಸದುಪಯೋಗ ಮಾಡಿಕೊಂಡು ಸದೃಢ ಬದುಕು ಕಟ್ಟಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ.